ಶಿವಮೊಗ್ಗ : ಸಿಟಿ ಬಸ್ ನಿಲ್ದಾಣದಲ್ಲಿ ಮನೆಗೆ ತೆರಳುತ್ತಿದ್ದ ಸರ್ಕಾರಿ ಶಾಲೆ ಶಿಕ್ಷಕಿಯ ವ್ಯಾನಿಟಿ ಬ್ಯಾಗ್‌ನಿಂದ 40 ಗ್ರಾಂ ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ದೊಡ್ಡಬೀಳಿನ ಅಮೃತನೂರಿನ ಸರ್ಕಾರಿ ಶಾಲೆ ಶಿಕ್ಷಕಿ ಸರೋಜಾ(58) ಮಾಂಗಲ್ಯ ಸರ ಕಳೆದುಕೊಂಡವರು. ಕೆಲಸ ಮುಗಿಸಿಕೊಂಡು ಶಿವಮೊಗ್ಗದ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಸಿಟಿ ಬಸ್ ಮೂಲಕ ಗೋಪಾಳಕ್ಕೆ ತೆರಳುವಾಗ ಕಳ್ಳತನ ಮಾಡಲಾಗಿದೆ.
ನಿಲ್ದಾಣದಲ್ಲಿ ಬಸ್ ಹತ್ತುವಾಗಲೇ ಸೀಟು ಬಿಟ್ಟುಕೊಟ್ಟ ಮಹಿಳೆಯು ಕುತ್ತಿಗೆಯಲ್ಲಿರುವ ಮಾಂಗಲ್ಯ ಸರ ನೇತಾಡುತ್ತಿದೆ ಎಂದು ಹೇಳಿದಾಗ ಶಿಕ್ಷಕಿ ಸರೋಜಾ ಅವರು ಸರವನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದರು. ಗುಡ್ ಲಕ್ ಸರ್ಕಲ್ ಬಳಿ ಪರಿಶೀಲಿಸಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿ ಮಾಂಗಲ್ಯ ಸರವಿತ್ತು. ಅಲ್ಲಿಂದ ಮುಂದೆ ರಾಮಕೃಷ್ಣ ಶಾಲೆ ಬಳಿ ಬಂದು ನೋಡಿದಾಗ ಮಾಂಗಲ್ಯ ಸರ ಕಳ್ಳತನವಾಗಿದೆ. ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
21/03/2026 11:09 am
LOADING...