ನೆಲಮಂಗಲ: ಐಷರ್ ವಾಹನ ಹರಿದು ಮೂರುವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಹನುಮಂತೇಗೌಡನಪಾಳ್ಯ ಗ್ರಾಮದಲ್ಲಿ ನಡೆದಿದೆ.
ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳಲು ಹೊರಟಿದ್ದ ಮಗು ತಾಯಿ ಕಣ್ಣೆದುರಲ್ಲೇ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟಿದೆ. ಲಕ್ಷ್ಮೀನಾರಾಯಣ ಮತ್ತು ಲಾವಣ್ಯ ದಂಪತಿಗಳ ಮೂರುವರೆ ವರ್ಷದ ಹೆಣ್ಣು ಮಗುವಾಗಿದ್ದ ನಿಶ್ಚಿತ ಮೃತಪಟ್ಟಿದ್ದು, ಮಗುವನ್ನು ಕಳೆದುಕೊಂಡ ತಾಯಿ ಲಾವಣ್ಯ ಮತ್ತು ಭಾಗ್ಯಮ್ಮ ರೋಧನೆ ಹೇಳತೀರದಾಗಿದೆ. ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ವಶಕ್ಕೆ ಪಡೆದು, ಚಾಲಕನನ್ನೂ ಬಂಧಿಸಲಾಗಿದೆ. ಸದ್ಯ ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/03/2026 05:07 pm
LOADING...