ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಐಷಾರಾಮಿ ಕಾರುಗಳ ದರ್ಬಾರ್..! ನಡುರಾತ್ರಿ ಡ್ರಿಫ್ಟಿಂಗ್ ಹುಚ್ಚಾಟ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಷಾರಾಮಿ ಕಾರುಗಳ ದರ್ಬಾರ್ ಮುಂದುವರೆದಿದೆ. ರಾತ್ರಿಯಾದ್ರೆ ಸಾಕು ರಸ್ತೆಯಲ್ಲಿ ಡ್ರಿಫ್ಟಿಂಗ್ ಮಾಡುವವರ ಸಂಖ್ಯೆ ಡಬಲ್ ಆಗಿದೆ. ಅನಿಲ್ ಕುಂಬ್ಳೆ ಸರ್ಕಲ್ ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್ ಮಾಡಿದ ಪುಂಡರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ರಾಜಾರೋಷವಾಗಿ ಕಾರು ಡ್ರಿಫ್ಟಿಂಗ್ ಮಾಡಲಾಗಿದೆ.

ಅನಿಲ್ ಕುಂಬ್ಳೆ ಸರ್ಕಲ್ ನಲ್ಲಿಯೇ ಎರಡ್ಮೂರು ಬಾರಿ ಐಷರಾಮಿ ಕಾರಿನಿಂದ ಡ್ರಿಫ್ಟಿಂಗ್ ಮಾಡಿದ್ದು, ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಡ್ರಿಫ್ಟಿಂಗ್ ವಿಡಿಯೋ ಸೆರೆ ಆಗಿದೆ. ಡ್ರಿಫ್ಟಿಂಗ್ ಮಾಡಿ ಅಲ್ಲಿಂದ ಅತೀ ವೇಗವಾಗಿ ಹೊರಟಿರೋ ಕಾರು ಚಾಲಕನ ಮೇಲೆ ಕ್ರಮಕ್ಕೆ ಆಗ್ರಹಿಸಲಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By :
PublicNext

PublicNext

21/03/2026 01:43 pm

Cinque Terre

9.15 K

Cinque Terre

0

ಸಂಬಂಧಿತ ಸುದ್ದಿ