ಬೆಂಗಳೂರು: ದೇವನಹಳ್ಳಿಯ ಆವತಿ ಗ್ರಾಮದಲ್ಲಿ ಒಂದೇ ದಿನ ಮೂರು ಮನೆಗಳಲ್ಲಿ ಕಳ್ಳತನ ನಡೆದಿದೆ.ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎರಡು ತಂಡಗಳಾಗಿ ಗ್ಯಾಂಗ್ ಬಂದು ಒಂದು ಮನೆಯಲ್ಲಿ 50 ಸಾವಿರ ನಗದು, ಎರಡನೇ ಮನೆಯಲ್ಲಿ ಚಿನ್ನ ಕಳ್ಳತನ ಮಾಡಿದ್ದಾರೆ.ಮೂರನೇ ಮನೆಯಲ್ಲೂ ಚಿನ್ನ ಕದ್ದು ಮಾಸ್ಕ್ ಗ್ಯಾಂಗ್ ಪರಾರಿಯಾಗಿದೆ.
ಅಲ್ಲದೇ ಗ್ರಾಮದ ಏರಿಯಾಗಳಲ್ಲಿ ಮಾಸ್ಕ್ ಗ್ಯಾಂಗ್ ರಾಜಾರೋಷವಾಗಿ ಓಡಾಟ ನಡೆಸಿದ್ದು, ಕಳ್ಳರ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೈಯಲ್ಲಿ ರಾಡು, ಚಾಕು, ದೊಣ್ಣೆ ಹಿಡಿದು ಬೀದಿಗಳಲ್ಲಿ ಕಳ್ಳರ ಕೈಚಳಕ ಕಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಪ್ರಕರಣ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/03/2026 05:50 pm
LOADING...