ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡು ರಸ್ತೆಯಲ್ಲಿ ದೊಣ್ಣೆಗಳನ್ನಿಡಿದು ಹೊಡೆದಾಡಿಕೊಂಡ ಯುವಕರು

ಬೆಂಗಳೂರು : ಹೊಸ ವರ್ಷದ ದಿನ ಇಸ್ಪಿಟ್ ಆಡುವ ವಿಚಾರಕ್ಕೆ ಎರಡು ಯುವಕರ ಗುಂಪಿನ ನಡುವೆ ಜಗಳ ನಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಂಚಿಗನಾಳ ಗ್ರಾಮದಲ್ಲಿ ನೆನ್ನೆ ಸಂಜೆ ನಡೆದಿದೆ.ಕಂಚಿಗನಾಳ ಗ್ರಾಮದ ಯುವಕರ ಮೇಲೆ ಬಿಡಿಗೆರೆ ಹಾಗೂ ರಾಜಘಟ್ಟ ಯುವಕರು ಹಲ್ಲೆ ನಡೆಸಿದ್ದಾರೆ.

ರಾಜಘಟ್ಟ ಅಭಿರಾಮ್, ಬಿಡಿಗೆರೆ ವೇಣು ಎಂಬುವವನಿಂದ ಕುಡಿದ ಮತ್ತಿನಲ್ಲಿ ಯುವಕರ ಜೊತೆಗೆ ಕಿರಿಕ್ ನಡೆದಿದೆ.ಇಸ್ಪಿಟ್ ಆಡುವ ವೇಳೆ ಕಂಚಿಗನಾಳ ಗ್ರಾಮದವರ ಮಾತಿನಿಂದ ಕಿರಿಕ್ ಮಾಡಿಕೊಂಡು ಬಡಿದಾಟ ನಡೆಸಿದ್ದಾರೆ.ಗ್ರಾಮದಲ್ಲಿ ಜಗಳ ಬಿಡಿಸಲು ಹೋದ ಪಂಚಾಯಿತಿ ಸದಸ್ಯೆಯ ಪತಿ ದೇವರಾಜ್ ಮೇಲೆಯೂ ಯುವಕರು ಹಲ್ಲೆ ನಡೆಸಿದ್ದಾರೆ.

ಘಟನೆ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

21/03/2026 07:36 pm

Cinque Terre

7.19 K

Cinque Terre

0