ಬೆಂಗಳೂರು : ನೆಲಮಂಗಲದ ಕುಣಿಗಲ್ ರಸ್ತೆಯ ಲ್ಯಾಂಕೋ ದೇವಿ ಟೋಲ್ ಬಳಿ ಸರಣಿ ಅಪಘಾತ ಸಂಭವಿಸಿದೆ.
ಬಲೇನೋ ಕಾರು ಏಕಾಏಕಿ ಬ್ರೇಕ್ ಹೊಡೆದ ಪರಿಣಾಮ ಒಂದರಂತೆ ಒಂದು ಕ್ಯಾಂಟರ್, ಬ್ರೀಜ಼ಾ ಮತ್ತು ಇನೋವಾ ಕಾರಿನ ನಡುವೆ ಡಿಕ್ಕಿ ಹೊಡೆದಿದೆ. ಇನ್ನೂ ಸರಣಿ ಅಪಘಾತದಿಂದ ಬಲೇನೋ ಕಾರಿನ ಹಿಂಭಾಗ, ಮತ್ತು ಇತರೆ ವಾಹನಗಳ ಮುಂಭಾಗ ಜಖಂ ಆಗಿದೆ.
ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾಸ್ಥಳಕ್ಕೆ ನೆಲಮಂಗಲ ಸಂಚಾರಿ ಮತ್ತು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
21/03/2026 12:15 pm
LOADING...