ನವದೆಹಲಿ : ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ 'ಭಾರತ್ ಎಲೆಕ್ಟ್ರಿಸಿಟಿ ಸಮಿಟ್ 2026' ರಲ್ಲಿ ಪಾಲ್ಗೊಂಡ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಅವರು, ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಕರ್ನಾಟಕವು ದೇಶಕ್ಕೆ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಒಟ್ಟು ವಿದ್ಯುತ್ ಸಾಮರ್ಥ್ಯದಲ್ಲಿ ಶೇ. 57 ರಷ್ಟು (21,000 MW) ಪಾಲನ್ನು ಪರಿಸರ ಸ್ನೇಹಿ ಮೂಲಗಳಿಂದಲೇ ಪಡೆಯಲಾಗುತ್ತಿದ್ದು, ಇದನ್ನು ಇನ್ನಷ್ಟು ಬಲಪಡಿಸಲು 19 ಗಿಗಾವ್ಯಾಟ್ ಸಾಮರ್ಥ್ಯದ 'ಗ್ರೀನ್ ಎನರ್ಜಿ ಕಾರಿಡಾರ್' ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ರೂಪಿಸಲಾಗುತ್ತಿರುವ ಈ ಯೋಜನೆಯು, ಉತ್ತರ ಕರ್ನಾಟಕದಲ್ಲಿ ಉತ್ಪತ್ತಿಯಾಗುವ ವಿದ್ಯುತ್ ಅನ್ನು ದಕ್ಷಿಣ ಭಾಗದ ಬೇಡಿಕೆಗೆ ಅನುಗುಣವಾಗಿ ಸಮರ್ಥವಾಗಿ ವಿತರಿಸಲು ಸಹಕಾರಿಯಾಗಲಿದೆ.
ಈ ಯೋಜನೆಯಡಿ 24 ಹೊಸ ಸಬ್‌ಸ್ಟೇಷನ್‌ಗಳು ಹಾಗೂ ಸುಧಾರಿತ ಬ್ಯಾಟರಿ ಸ್ಟೋರೇಜ್ ಸಿಸ್ಟಮ್‌ಗಳನ್ನು ಅಳವಡಿಸಲಾಗುತ್ತಿದ್ದು, ಸ್ಥಳೀಯ ವಿದ್ಯುತ್ ಉಪಕರಣ ತಯಾರಕರಿಗೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ.
PublicNext
21/03/2026 05:44 pm
LOADING...