ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಗೆಹರಿಯದ ದಾವಣಗೆರೆ ಟಿಕೆಟ್ ಗೊಂದಲ! ಜಮೀರ್ - ಮಲ್ಲಿಕಾರ್ಜುನ್ ಜೊತೆ ಒಟ್ಟಿಗೆ ಮಾತುಕತೆ

ದಾವಣಗೆರೆ ಉಪ ಚುನಾವಣೆ ಹಿನ್ನೆಲೆ ಯಾರಿಗೆ ಟಿಕೆಟ್ ನೀಡಬೇಕೆಂದು ನಿರ್ಧರಿಸಲಾಗದೇ ಇಕ್ಕಟ್ಟಿಗೆ ಸಿಲುಕಿರೋ ಕಾಂಗ್ರೆಸ್ ಮುಖಂಡರು ಇಂದು ಸಂಜೆ ಸಿಎಂ, ಡಿಸಿಎಂ ಅವರ ಸಮಕ್ಷಮದಲ್ಲಿ ಮಹತ್ವದ ಸಭೆ ನಡೆಸಲಾಯಿತು.

ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಜಮೀರ್ ಅಹಮದ್ ಖಾನ್ ಅವರನ್ನು ಒಟ್ಟಿಗೆ ಕೂರಿಸಿಕೊಂಡು ಟಿಕೆಟ್ ಗೊಂದಲವನ್ನು ಪರಿಹರಿಸಲೆತ್ನಿಸಲಾಯಿತು. ಈ ವೇಳೆ, ಎಸ್.ಎಸ್.ಮಲ್ಲಿಕಾರ್ಜುನ ಅವರು ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ತಮ್ಮ ಪುತ್ರ ಸಮರ್ಥ್ ಗೆ ಟಿಕೆಟ್ ಕೊಡಬೇಕೆಂಬ ಅಹವಾಲು ಮಂಡಿಸಿದರೆ, ಜಮೀರ್ ಅಹಮದ್ ಅವರು ದಾವಣಗೆರೆಯಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಅಧಿಕವಾಗಿದ್ದು, ಆ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲು ಅಲ್ಪಸಂಖ್ಯಾತ ಅಭ್ಯರ್ಥಿಗೇ ಬಿ-ಫಾರಮ್ ನೀಡಬೇಕೆಂದು ಒತ್ತಿ ಹೇಳಿದರು ಎಂದು ಕಾಂಗ್ರೆಸ್ ಆಪ್ತ ಮೂಲಗಳು ತಿಳಿಸಿವೆ.

ಇಬ್ಬರು ಸಚಿವರ ವಾದವನ್ನು ಆಲಿಸಿದ ಸುರ್ಜೇವಾಲ ಅವರು ಈ ಕುರಿತ ನಿರ್ಧಾರವನ್ನು ದೆಹಲಿ ವರಿಷ್ಠರು ಇಂದು ರಾತ್ರಿ ಇಲ್ಲವೇ ಭಾನುವಾರ ಬೆಳಗ್ಗೆ ಪ್ರಕಟಿಸಬಹುದು ಎಂದು ಹೇಳಿ ಸಭೆಯನ್ನು ಬರ್ಖಾಸ್ತು ಮಾಡಲಾಯಿತೆಂದೂ ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸಚಿವ ಬೈರತಿ ಸುರೇಶ್, ಸಂಸದ ನಾಸೀರ್ ಹುಸೇನ್, ಸಿಎಂ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕರಾದ ಹ್ಯಾರೀಸ್, ರಿಜ್ವಾನ್ ಹರ್ಷದ್, ರಾಜ್ಯ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಗಳಾದ ಅಭಿಷೇಕ್ ದತ್, ಗೋಪಿನಾಥನ್ ಅವರು ಉಪಸ್ಥಿತರಿದ್ದರು.

Edited By :
PublicNext

PublicNext

21/03/2026 10:38 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ