ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಅಕ್ರಮ ಮರಳು ದಾಸ್ತಾನು - ಎಸಿ ನೇತೃತ್ವದಲ್ಲಿ ದಾಳಿ

ಶಿವಮೊಗ್ಗ : ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೇ ಸಾಗ್ತಿದೆ. ನಗರದ ಮಂಡ್ಲಿಯಲ್ಲಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿದ್ದ ಸ್ಥಳಕ್ಕೆ ಎಸಿ ಸತ್ಯನಾರಾಯಣ್ ನೇತೃತ್ವದಲ್ಲಿ ದಾಳಿ ನಡೆಸಿ 60 ಲೋಡ್ ಮರಳನ್ನು ವಶಪಡಿಸಿಕೊಂಡಿದ್ದಾರೆ.

ತಾಲೂಕು ಮರಳು ಕಾರ್ಯಪಡೆ ಸಮಿತಿ 60 ಲೋಡ್ ಅಕ್ರಮ ಮರಳನ್ನು ತುಂಗಾನಗರ ಮತ್ತು ದೊಡ್ಡಪೇಟೆ ಠಾಣೆ ವ್ಯಾಪ್ತಿಯಿಂದ ವಶಪಡಿಸಿ, ಜಿಲ್ಲಾ ಕಾರ್ಯಪಡೆ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ಫ್ರೀಡಂ ಪಾರ್ಕ್ ಆವರಣಕ್ಕೆ ಸ್ಥಳಾಂತರಿಸಿದ್ದಾರೆ.

ದಾಳಿ ವೇಳೆ ಉಪವಿಭಾಗಾಧಿಕಾರಿ ಸತ್ಯನಾರಾಯಣ, ಗಣಿ ಮತ್ತು ಭೂ ವಿಜ್ಞಾನಿ ಪ್ರಿಯಾ ದೊಡ್ಡಗೌಡ್ರು, ಆರ್.ಐ.ಸತೀಶ್, ವಿನಾಯಕ ಸ್ವಾಮಿ ಇದ್ದರು.

Edited By :
PublicNext

PublicNext

21/03/2026 08:44 pm

Cinque Terre

6.2 K

Cinque Terre

0

ಸಂಬಂಧಿತ ಸುದ್ದಿ