ಚಳ್ಳಕೆರೆ :ಯುಗಾದಿ ಮತ್ತು ರಂಜಾನ್ ಹಬ್ಬಗಳು ಒಂದೇ ದಿನ ಬಂದಿರುವುದು ಸಮಾಜದಲ್ಲಿ ಸೌಹಾರ್ದತೆ ಹಾಗೂ ಏಕತೆಯನ್ನು ಬಲಪಡಿಸುವ ಸಂಕೇತವಾಗಿದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಚಳ್ಳಕೆರೆ ನಗರದ ಈದ್ಗಾ ಮೈದಾನದಲ್ಲಿ ನಡೆದ ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ ಅವರು,
ಯುಗಾದಿ ಹಾಗೂ ರಂಜಾನ್ ಹಬ್ಬಗಳು ಸರ್ವಧರ್ಮ ಸಮಾನತೆಯ ಪ್ರತೀಕ “ಎಲ್ಲರೂ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಬದುಕಬೇಕು. ರಂಜಾನ್ ಪವಿತ್ರ ತಿಂಗಳಾಗಿದ್ದು, ಇದು ಶಾಂತಿ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುತ್ತದೆ.”
ಮುಸ್ಲಿಂ ಬಾಂಧವರು 30 ದಿನಗಳ ಉಪವಾಸ ಆಚರಿಸಿ, ಆಧ್ಯಾತ್ಮಿಕ ಚಿಂತನೆ, ಕುರಾನ್ ಪಠಣ ಹಾಗೂ ದಾನ ಧರ್ಮಗಳಲ್ಲಿ ತೊಡಗುತ್ತಾರೆ
“ಅಲ್ಲಾಹನು ಒಳ್ಳೆಯದನ್ನೇ ನೋಡಬೇಕು, ಒಳ್ಳೆಯದನ್ನೇ ಮಾತನಾಡಬೇಕು ಹಾಗೂ ಸಕಾರಾತ್ಮಕವಾಗಿ ಯೋಚಿಸಬೇಕು ಈ ಮೌಲ್ಯಗಳನ್ನು ಜೀವನದಲ್ಲಿ ನಾವು ನೀವೆಲ್ಲ ಅಳವಡಿಸಿಕೊಳ್ಳಬೇಕು.” ಅಲ್ಲದೆ ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನ ಮಾಡಿಕೊಂಡು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
Kshetra Samachara
21/03/2026 09:28 pm
LOADING...