ಶಿವಮೊಗ್ಗ : ತಾಲೂಕಿನ ದ್ಯಾವಿನಕೆರೆಯಲ್ಲಿ ಸಾಲದ ಬಾಧೆಗೆ ಸಿಲುಕಿ 45 ವರ್ಷದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ನಡುವೆಯೂ ಅವರ ಪುತ್ರ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾನೆ.
ಕುಂಸಿ ಠಾಣಾ ವ್ಯಾಪ್ತಿಯಲ್ಲಿ ಬರುವ ದ್ಯಾವಿನಕೆರೆಯಲ್ಲಿ ಮಂಜುನಾಥ್ ಎಂಬ 45 ವರ್ಷದ ವ್ಯಕ್ತಿ ಸಾಲಬಾಧೆಯಿಂದ ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದರ ನಡುವೆ ಮಗ ಪ್ರೀತಮ್ ಇಂದು ಎಸ್ ಎಸ್ಎಲ್ ಸಿ ಪರೀಕ್ಷೆ ಬರೆಯುತ್ತಿದ್ದಾನೆ. ಮಂಡಘಟ್ಟದಲ್ಲಿ ಅಭ್ಯಾಸಿಸುತ್ತಿದ್ದ ಪ್ರೀತಮ್ ಆಯನೂರಿನ ಶಾಲೆಗೆ ಬಂದು ಪರೀಕ್ಷೆ ಬರೆದಿದ್ದಾನೆ.
PublicNext
28/03/2026 06:09 pm
LOADING...