ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಿಗೆರೆ: ಬೈಕ್ ಎಂಜಿನ್ ಸೇರಿಕೊಂಡ ನಾಗಪ್ಪ ಉರಗ ತಜ್ಞ ಆರೀಫ್‌ರಿಂದ ಸಾಹಸಮಯ ರಕ್ಷಣೆ

ಮೂಡಿಗೆರೆ: ದ್ವಿಚಕ್ರ ವಾಹನವೊಂದರ ಎಂಜಿನ್ ಒಳಗೆ ನಾಗರಹಾವೊಂದು ಅಡಗಿ ಕುಳಿತು ಆತಂಕ ಸೃಷ್ಟಿಸಿದ್ದ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್‌ನಲ್ಲಿ ನಡೆದಿದೆ. ಕರ್ನಾಟಕ ಬ್ಯಾಂಕ್ ಉದ್ಯೋಗಿಯಾದ ಸಚಿನ್ ಎಂಬುವವರಿಗೆ ಸೇರಿದ ಬೈಕ್‌ನಲ್ಲಿ ಈ ನಾಗರಹಾವು ಕಾಣಿಸಿಕೊಂಡಿದ್ದು ಇದನ್ನು ಗಮನಿಸಿದ ದಾರಿಹೋಕರು ತಕ್ಷಣವೇ ಬೈಕ್ ಮಾಲೀಕ ಸಚಿನ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

​ತಮ್ಮ ವಾಹನದೊಳಗೆ ವಿಷಪೂರಿತ ಹಾವು ಇರುವುದನ್ನು ಕಂಡು ಬೆಚ್ಚಿಬಿದ್ದ ಸಚಿನ್, ತಕ್ಷಣವೇ ಉರಗ ರಕ್ಷಕ ಆರೀಫ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಆರೀಫ್ ಅವರು ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ, ಅವಿತಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಉರಗ ರಕ್ಷಕನ ಸಮಯಪ್ರಜ್ಞೆ ಹಾಗೂ ಸಾಹಸಮಯ ಕೆಲಸದಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದ್ದು, ರಕ್ಷಿಸಲಾದ ಹಾವನ್ನು ನಂತರ ಜನವಸತಿ ಇಲ್ಲದ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.

Edited By : Manjunath H D
PublicNext

PublicNext

28/03/2026 10:36 pm

Cinque Terre

10.99 K

Cinque Terre

0