ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಹಿಂಬದಿಯಿಂದ ಗುದ್ದಿದ ಲಾರಿ : ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಹೊಸಪೇಟೆ : ಹಿಂಬದಿಯಿಂದ ಬಂದು ಗುದ್ದಿದ ಲಾರಿ ಗುದ್ದಿದ್ದು, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಣಾಪುರ ಗ್ರಾಮದ ಬಳಿ ನಡೆದಿದೆ. ಗುಂಡಾ ತಾಂಡಾದ ನಿವಾಸಿ, ಕಿರಣ್ ( 27) ಮೃತ ಬೈಕ್ ಸವಾರ ಅಂತ ಗುರುತಿಸಲಾಗಿದೆ.

ಗುಂಡಾ ತಾಂಡದಿಂದ, ಹೊಸಪೇಟೆಗೆ ಮಾತ್ರೆ ತರಲು ಮೃತ ಬೈಕ್ ಸವಾರ ಕಿರಣ್ ಹೋಗುತ್ತಿದ್ದ. ಬೆಂಗಳೂರಿನಿಂದ ಅಹ್ಮದಾಬಾದ್ ಕಡೆಗೆ ಹೋಗುತ್ತಿದ್ದ ಲಾರಿ, ಬೈಕ್ ಸವಾರನಿಗೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ತಲೆ ಮತ್ತು ಬೆನ್ನು, ಮುಖಕ್ಕೆ ಬಲವಾದ ಗಾಯವಾದ್ದರಿಂದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಿಂಬದಿಯಿಂದ ಗುದ್ದಿದ ಲಾರಿ ಚಾಲಕ ನಿಲ್ಲಿಸದೇ ತೆರಳಿದ್ದರಿಂದ ಲಾರಿಯನ್ನು ಚೇಸ್ ಮಾಡಿ ಹಿಡಿದು ಮರಿಯಮ್ಮನಹಳ್ಳಿ ಪೊಲೀಸರು ಚಾಲಕನ ವಿಚಾರಣೆ ಮಾಡುತ್ತಿದ್ದಾರೆ. ಹಗರಿಬೊಮ್ಮನ ಹಳ್ಳಿ ಸಿಪಿಐ, ವಿಕಾಸ್ ಲಮಾಣಿ, ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ತಾರಾಬಾಯಿ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Edited By :
Kshetra Samachara

Kshetra Samachara

31/03/2026 07:54 pm

Cinque Terre

1.54 K

Cinque Terre

0