ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾತ್ರೆಗೆ ಬಂದವರ ಪಾಲಿಗೆ ಮೃತ್ಯು ಕೂಗು : ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು.!

ಹರಪನಹಳ್ಳಿ : ನೀರಿನಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಕೆರೆಯಲ್ಲಿ ನಡೆದಿದೆ. ಬಿಇ ಓದುತ್ತಿದ್ದ M.G ಮನು(19 ), ಪಿಯುಸಿ ಓದುತ್ತಿದ್ದ MG ಪ್ರಜ್ವಲ್ (18) ಮೃತಪಟ್ಟ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

ಮನು ಬೆಂಗಳೂರಲ್ಲಿ ಬಿಇ ಓದುತ್ತಿದ್ದ. ಪ್ರಜ್ವಲ್ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಪಿಯುಸಿ ಓದಿ ಕೆಲವೇ ದಿನಗಳ ಹಿಂದಷ್ಟೇ ಪರೀಕ್ಷೆ ಬರೆದು ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮಕ್ಕೆ ತೆರಳಿದ್ದ. ಕೆರೆಗೆ ಇಳಿದಿದ್ದ ಮೂರು ಜನ ಹಲವಾಗಲು ಗ್ರಾಮದ ಆಂಜನೇಯ ದೇವರ ಜಾತ್ರೆಗೆ ಬಂದಿದ್ದರು. ಆಗ ಕುಟುಂಬಸ್ಥರಿಗೆ ಗೊತ್ತಿಲ್ಲದೆ ಕೆರೆಗೆ ಇಳಿದಾಗ ಮನಕಲಕುವ ದಾರುಣ ಘಟನೆ ನಡೆದಿದೆ.

ಇದೇ ವೇಳೆ ತಂದೆ ಮಂಜಪ್ಪ ಕಿರಿಯ ಮಗ ಚಿರಂಜೀವಿಯನ್ನು ಕಾಪಾಡಿದ್ದು, ಮೂವರ ಪೈಕಿ ಒಬ್ಬ ಬದುಕುಳಿದಂತಾಗಿದೆ. ಮೂವರು ಕೆರೆಗೆ ಈಜಾಡಲು ಹೋಗಿದ್ದರು ಅಂತ ಮಾಹಿತಿ ಇದೆ. ಈ ವೇಳೆ ಈಜು ಬಾರದೆ ಬದುಕಿ ಬಾಳಬೇಕಿದ್ದ ಇಬ್ಬರು ಯುವಕರು ಬಾರದ ಲೋಕಕ್ಕೆ ತೆರಳಿದ್ದಾರೆ. ಮಕ್ಕಳನ್ನ ಕಳೆದುಕೊಂಡ ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದ್ದು, ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

22/03/2026 09:01 pm

Cinque Terre

21.49 K

Cinque Terre

0

ಸಂಬಂಧಿತ ಸುದ್ದಿ