ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಕರಡಿ ದಾಳಿಯಿಂದ ಕಿವಿ, ತಲೆ, ಕಣ್ಣಿನ ಭಾಗಕ್ಕೆ ಗಂಭೀರ ಗಾಯ, ಗಾಯಾಳು ರೈತನಿಗೆ ಟ್ರಾಮಾ ಕೇರ್'ನಲ್ಲಿ ಚಿಕಿತ್ಸೆ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ರೈತನ ಮೇಲೆ ಭೀಕರ ಕರಡಿ ದಾಳಿ ಮಾಡಿದೆ. ಕರಡಿ ದಾಳಿಯ ಹೊಡೆತಕ್ಕೆ ರೈತನ ತಲೆ, ಕಣ್ಣಿನ ಭಾಗಕ್ಕೆ ಗಂಭೀರ ಗಾಯ ಆಗಿದೆ. ರಾಯಪ್ಪ(50) ಕರಡಿ ದಾಳಿಗೆ ಒಳಗಾದ ರೈತ ಅಂತ ಗುರುತಿಸಲಾಗಿದೆ.

ಬೆಳಗ್ಗೆ ವಾಯುವಿಹಾರಕ್ಕೆ ಹೋದಾಗ ಕರಡಿ ರೈತನ ಮೇಲೆ ಭೀಕರ ದಾಳಿ ಮಾಡಿದೆ. ಇದರಿಂದ ಕಣ್ಣು ಮತ್ತು ಕಿವಿ ಭಾಗಕ್ಕೆ ಗಂಭೀರ ಗಾಯ ಆಗಿದೆ. ಗಾಯಾಳು ರೈತನನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ ಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

01/04/2026 04:33 pm

Cinque Terre

6.16 K

Cinque Terre

0

ಸಂಬಂಧಿತ ಸುದ್ದಿ