ಹೊಸಪೇಟೆ : ತುಂಗಭದ್ರಾ ಮಂಡಳಿಯ ಮಾಲೀಕತ್ವದಲ್ಲಿರೋ ಜಾಗವನ್ನ ವ್ಯಕ್ತಿಯೋರ್ವ ಸುಳ್ಳು ದಾಖಲೆ ಸೃಷ್ಟಿಸಿ ಅನಧಿಕೃತವಾಗಿ ನಿವೃತ್ತ ನ್ಯಾಯಾಧೀಶರೊಬ್ಬರಿಗೆ ಮಾರಾಟ ಮಾಡಿದ್ದಾನೆ. ಟಿಬಿ ಬೋರ್ಡ್ ಜಾಗವನ್ನ ಖರೀದಿಸಿದ ಬಳಿಕ ತುಂಗಭದ್ರಾ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ನಿವೃತ್ತ ನ್ಯಾಯಾಧೀಶೆಯ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಹೊಸಪೇಟೆಯ ನ್ಯಾಯಾಲಯ ಇದು ಅಕ್ರಮವೆಂದು ಆದೇಶ ನೀಡಿದೆ. ಆ ಜಾಗದಲ್ಲಿ ಮನೆ ಕಟ್ಟಿದ್ದನ್ನು ಕೋರ್ಟ್ ಆಕ್ಷೇಪಿಸಿ ಮನೆಯನ್ನು ನೆಲಸಮಗೊಳಿಸಲು ಆದೇಶ ನೀಡಿದೆ. ಯಥಾಸ್ಥಿತಿ ಕಾಪಾಡಬೇಕು ಎಂಬ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಮಹಿಳೆಗೆ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ ಅಂತ ತುಂಗಭದ್ರಾ ಆಡಳಿತ ಮಂಡಳಿಯ ಕಾರ್ಯದರ್ಶಿ ಒ ಆರ್ ಕೆ ರೆಡ್ಡಿ ಮಾಹಿತಿ ನೀಡಿದ್ರು.
ತುಂಗಭದ್ರಾ ಆಡಳಿತ ಮಂಡಳಿ ನಿವೇಶನ ಸಂದರ್ಭದಲ್ಲಿ ಅಂದರೆ ಅದು, ಕರ್ನಾಟಕ, ಆಂಧ್ರಪ್ರದೇಶದ ಮತ್ತು ತೆಲಂಗಾಣ ರಾಜ್ಯಗಳಿಗೆ ಒಳಪಟ್ಟ ಜಾಗ ಆಗಿದೆ. ಆ ಜಾಗದಲ್ಲಿ ಯಾರು ಶಾಶ್ವತ ಕಟ್ಟಡ ನಿರ್ಮಿಸುವಂತಿಲ್ಲ. ಹೀಗಿದ್ದರೂ ನಿಶಾನಿ ಕ್ಯಾಂಪ್ ಪ್ರದೇಶದ ಟಿಬಿ ಡ್ಯಾಮ್ ಆಸ್ಪತ್ರೆ ಹಿಂದೆ ಇರುವ 80*100 ಅಡಿ ವಿಸ್ತೀರ್ಣದ ಸ್ಥಳದಲ್ಲಿ ಬೃಹತ್ ಕಟ್ಟಡ ನಿರ್ಮಿಸಲು ನಿವೃತ್ತ ನ್ಯಾಯಾಧೀಶೆ ಒಬ್ಬರು ಮುಂದಾಗಿದ್ರು. ಆದ್ದರಿಂದ ಕಟ್ಟಡ ನಿರ್ಮಿಸಿದ್ದು ತಪ್ಪು ಎಂದು ಸಿವಿಲ್ ಕೋರ್ಟ್ ಮಾರ್ಚ್ 28 ರಂದು ಆದೇಶದಲ್ಲಿ ಪ್ರಕಟಿಸಿದೆ. ಕೋರ್ಟ್ ಆದೇಶವನ್ನು ಹಂತಹಂತವಾಗಿ ಜಾರಿಗೆ ತರಲಾಗಿದೆ. ಕಟ್ಟಡ ನೆಲಸಮ ಮಾಡಲು ಮುಂದಿನ ದಿನಗಳಲ್ಲಿ ನಡೆಯಲಿದೆ. ಇದೇರೀತಿ ಸುಮಾರು 22 ಪ್ರಕರಣಗಳು ವಿವಿಧ ಕೋರ್ಟ್ ಗಳಲ್ಲಿ ವಿಚಾರಣೆ ಹಂತದಲ್ಲಿ ಇವೆ. ತುಂಗಭದ್ರಾ ಮಂಡಳಿಯ ನಿವೇಶನಗಳಲ್ಲಿ, ವಿದ್ಯುತ್ ಉತ್ಪಾದನಾ ಸ್ಥಾವರಗಳ ಬಳಿ ಮತ್ತು ಕಾಲುವೆಗಳ ಅಕ್ಕಪಕ್ಕ, ಯಾವುದೇ ರೀತಿ ಶಾಶ್ವತ ಕಟ್ಟಡ ನಿರ್ಮಿಸಬಾರದು ಇವೆಲ್ಲಾ ನಿಷೇಧಿತ ಪ್ರದೇಶವಾಗಿದೆ ಅಂತ ಟಿಬಿ ಬೋರ್ಡ್ ಮುಖ್ಯ ಇಂಜಿನಿಯರ್ ನಾರಾಯಣ ನಾಯ್ಕ್ ಹೇಳಿದ್ರು.
ಏನೇ ಆಗಲಿ ಸರ್ಕಾರದ ನಿಷಿದ್ಧ ಪ್ರದೇಶದಲ್ಲಿನ ಜಾಗವನ್ನ ನಿವೃತ್ತ ಜಡ್ಜ್ ಆಗಿಯೂ ಮೂಲ ದಾಖಲಾತಿಯನ್ನ ಖುಲಂಕುಷವಾಗಿ ಪರಿಶೀಲಿಸದೇ ಖರೀದಿ ಮಾಡಿ ಮೋಸ ಹೋಗಿದ್ದಾರಾ ಅಂತ ಜನ ಮಾತಾಡಿಕೊಳ್ತಿದ್ದಾರೆ.
Kshetra Samachara
03/04/2026 10:05 pm