ಕೊಟ್ಟೂರು : ಶಿಕ್ಷಣ ಇಲಾಖೆ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿರೋ ಡೆಲ್ಲಿ ವರ್ಲ್ಡ್ ಸ್ಕೂಲ್ ಪರವಾನಗಿ ರದ್ದು ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ CBSE ಪಠ್ಯಕ್ರಮ ಮತ್ತು NCERT ಪುಸ್ತಕಗಳನ್ನು ಡೆಲ್ಲಿ ವರ್ಲ್ಡ್ ಶಾಲೆಯಲ್ಲಿ ಮಕ್ಕಳಿಗೆ ಬೋಧನೆ ಮಾಡಲಾಗ್ತಾಯಿತ್ತು. ಇದರ ಆಧಾರದ ಮೇಲೆ ಶಿಕ್ಷಣ ಇಲಾಖೆ ಇದೀಗ ಶಾಲಾ ಲೈಸೆನ್ಸ್ ರದ್ದು ಮಾಡಿ ಆದೇಶ ಹೊರಡಿಸಿದೆ. ಡೆಲ್ಲಿ ವರ್ಲ್ಡ್ ಶಾಲೆಯಲ್ಲಿ ಎಲ್ ಕೆಜಿ ಯಿಂದ ಎಂಟನೇ ತರಗತಿಯವರೆಗೂ ರಾಜ್ಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಅನುಮತಿ ಪಡೆದಿತ್ತು. ಆದರೆ, ಪರವಾನಗಿ ಇಲ್ಲದೇ ಸಿಬಿಎಸ್ಇ ಬೋಧನೆ ಮಾಡ್ತಿರೋ ಬಗ್ಗೆ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಕೂಡ್ಲಿಗಿ ತಾಲೂಕಿನ ಬಿಇಓ ಸ್ಕೂಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಈ ವೇಳೆ ಅಕ್ರಮವಾಗಿ ಸಿಬಿಎಸ್ಇ ಪಠ್ಯಕ್ರಮ ಬೋಧಿಸುತ್ತಿರುವುದು ಕಂಡುಬಂದಿತ್ತು. ಇದರ ಆಧಾರದ ಮೇಲೆ ಶಾಲಾ ಲೈಸೆನ್ಸ್ ಮತ್ತು ಸಿಬಿಎಸ್ಇ ಪಠ್ಯಕ್ರಮಕ್ಕೆ ನೀಡಿದ ಎನ್ಒಸಿಯನ್ನು ಹಿಂದೆ ಪಡೆದು ರದ್ದು ಮಾಡಲಾಗಿದೆ. ಶಾಲೆಯ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ತಕ್ಷಣವೇ ಸಮೀಪದ ಸರ್ಕಾರಿ ಶಾಲೆಗೆ ಹಸ್ತಾಂತರ ಮಾಡಲು ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Kshetra Samachara
02/04/2026 11:48 am
LOADING...