ಹೊಸಪೇಟೆ : ಆಕಸ್ಮಿಕ ವಿದ್ಯುತ್ ತಗಲಿ ಗೃಹರಕ್ಷಕ ದಳದ ಸಿಬ್ಬಂದಿ ಮನೆ ಸುಟ್ಟು ಕರಕಲಾದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಮನೆ ಸಂಪೂರ್ಣ ಭಸ್ಮ ಆಗಿದೆ ಎನ್ನಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಎಂಪಿ. ಪ್ರಕಾಶ್ ನಗರದಲ್ಲಿ ಈ ಘಟನೆ ನಡೆದಿದೆ. ಪಿ.ಬಾಷಾಸಾಬ್ ಎನ್ನುವ ಗೃಹರಕ್ಷಕ ಸಿಬ್ಬಂದಿಗೆ ಸೇರಿದ ಮನೆ ಅಂತ ಗುರುತಿಸಲಾಗಿದೆ.
ತಗಡಿನ ಮನೆಯಾಗಿರೋ ಕಾರಣ ಮನೆ ಸಂಪೂರ್ಣ ಮನೆ ಸುಟ್ಟು ಹೋಗಿದೆ. ಬೆಂಕಿ ಹೊತ್ತಿದ ಕಾರಣ ಮನೆಯಲ್ಲಿನ ದವಸ, ಧಾನ್ಯಗಳು, ಪಾತ್ರೆ, ಪಡಗ ಸಂಪೂರ್ಣ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಮನೆಯಲ್ಲಿನ ಮಕ್ಕಳು, ಪತ್ನಿಗೆ ಯಾವುದೇ ಅನಾಹುತವಾಗಿಲ್ಲ. ಸ್ಥಳೀಯರು, ಅಗ್ನಿಶಾಮಕದಳದ ಸಿಬ್ಬಂದಿಯಿಂದ ಬೆಂಕಿ ನಂದಿಸೋ ಕೆಲಸ ಮಾಡಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
05/04/2026 09:56 pm
LOADING...