ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿನ ಹಂಪಮ್ಮ ಅನ್ನೋ ಮಹಿಳೆ ಜೀವಂತ ಇದ್ರೂ ಸತ್ತಿದ್ದಾಳೆ ಅಂತ ಆಧಾರ್ ಕಾರ್ಡ್ ರದ್ದು ಮಾಡಿದ ಪ್ರಕಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿದ ಕೇವಲ ಒಂದೇ ದಿನದಲ್ಲಿ ಬಿಗ್ ಇಂಪ್ಯಾಕ್ಟ್ ಆಗಿದೆ.
ಮೂವರು ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಸ್ವಯಂಕೃತ ದೂರು ದಾಖಲಿಸಿಕೊಂಡು ಮೂವರು ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದಾರೆ.
ಹೊಸಪೇಟೆ ತಹಶಿಲ್ದಾರ್, ಹೊಸಪೇಟೆ ಇಓ, ಗ್ರಾ.ಪಂ ಪಿಡಿಓ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಕೃತ ದೂರು ದಾಖಲಾಗಿದೆ. ಸತ್ತ ಮಹಿಳೆ ಜೀವಂತ, ಜೀವಂತ ಮಹಿಳೆ ಸಾವು ಅಂತ ನಮೂದು ಅನ್ನೋ ಟ್ಯಾಗ್ ಲೈನ್ ಅಡಿ ಪಬ್ಲಿಕ್ ನೆಕ್ಸ್ಟ್ ರಾಜ್ಯಾದ್ಯಂತ ವರದಿ ಬಿತ್ತರಿಸಿತ್ತು.
ಇದ್ರ ಬೆನ್ನಲ್ಲೇ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಇದು ಸಾಮಾನ್ಯ ಲೋಪವಲ್ಲ. ಬದಲಿಗೆ ಸಂವಿಧಾನದ ಅನುಚ್ಛೇದ 14, (ಸಮಾನತೆ) 21, ಜೀವಿಸುವ ಹಕ್ಕು, 300ಎ ಆಸ್ತಿಹಕ್ಕು ಅಡಿಯಲ್ಲಿ ನೀಡಲಾದ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂಬುದು ಉಪಲೋಕಾಯುಕ್ತರ ಸ್ಪಷ್ಟ ನಿಲುವಾಗಿದೆ.
ಬಡ ಮಹಿಳೆ ಬದುಕಿದ್ದಾಗಲೇ ಮೃತ ಎಂದು ದಾಖಲೆ ಸಮೇತ ಕಂಡು ಬಂದಿದೆ. ಇದು ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅಸಡ್ಡೆಗೆ ಸಾಕ್ಷಿಯಾದ ಅಭಿಪ್ರಾಯ ಆಗಿದೆ. ಜೀವಂತ ಮಹಿಳೆಯ ಆಧಾರ್ ರದ್ದು, ಸತ್ತಿರುವ ಮಹಿಳೆ ಜೀವಂತ ಇಟ್ಟಿರುವ ಬಗ್ಗೆ ಪೂರಕ ದಾಖಲೆ ಸಮೇತ ಮೇ.20ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಕಳೆದ ಎರಡು ವರ್ಷದಿಂದ ಮಹಿಳೆ ಹಂಪಮ್ಮ ಅವರ ಆಧಾರ್ ನಲ್ಲಿ ಡೆತ್ ಅಂತ ನಮೂದು ಮಾಡಿದ್ರಿಂದ ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಿಂದ ವಂಚಿತ ಆಗಿದ್ದಾಳೆ. ಈ ಹಣ ಸಾವನ್ನಪ್ಪಿರುವ ಇನ್ನೊಬ್ಬ ಹಂಪಮ್ಮ ಅವರ ಖಾತೆಗೆ ಜಮೆ ಆಗಿದೆ ಅನ್ನೋ ಅನುಮಾನ ಇದೆ. ಇದರ ಬಗ್ಗೆಯೂ ಕೂಲಂಕುಷ ತನಿಖೆ ಆಗಬೇಕು ಅಂತ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಏನೇ ಹೇಳಿ ಅಧಿಕಾರಿಗಳಿಗೆ ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಅದೇ ಸರ್ಕಾರಿ ಅಧಿಕಾರಿಗಳು ಬಡ ಮಹಿಳೆಯ ಬಾಳಲ್ಲಿ ಬಿರುಗಾಳಿ ಸೃಷ್ಟಿಸಿರೋದು ನಿಜಕ್ಕೂ ಶೋಚನೀಯ ಸಂಗತಿ. ಅತ್ತ ಬಡ ಮಹಿಳೆಯ ಬೆನ್ನಿಗೆ ನಿಂತ ಉಪಲೋಕಾಯುಕ್ತ ಬಿ.ವೀರಪ್ಪಗೆ ಕುಟುಂಬಸ್ಥರು ಧನ್ಯವಾದ ಹೇಳಿದ್ದಾರೆ.
PublicNext
05/04/2026 12:00 pm