ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾತಾ ಮಂಜಮ್ಮರ ಭಾವನಾತ್ಮಕ ಕರೆ: ಸರಿಯಾದ ಮಾಹಿತಿ ನೀಡಿ, ದೇಶ ಕಟ್ಟೋಣ!

ಹೊಸಪೇಟೆ : ಭಾರತ ಸರ್ಕಾರದ ವತಿಯಿಂದ ನಡೆಯುತ್ತಿರುವ ಜನಗಣತಿ ಯೋಜನೆಗೆ ನಮ್ಮ ಜನಗಣತಿ ನಮ್ಮ ಅಭಿವೃದ್ಧಿ ಧ್ಯೇಯವಾಕ್ಯದಡಿ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಎದುರು ಡಿಸಿ ಕವಿತಾ ಮನ್ನಿಕೇರಿ ಚಾಲನೆ ನೀಡಿದರು. ಅದರ ಜೊತೆಗೆ ನಗರದ ಪಿಡಿಐಟಿ ಕಾಲೇಜಿನಲ್ಲಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಕೂಡ ಹಮ್ಮಿಕೊಳ್ಳಲಾಗಿತ್ತು. ಜನಗಣತಿ ಡಿಜಿಟಲ್ ರಿಜಿಸ್ಟರ್ ತಮ್ಮ ಹೆಸರನ್ನು ನೋಂದಾಯಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ರಿಜಿಸ್ಟರ್ ಮಾಡಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು.

ಬಳಿಕ ಮಾತನಾಡಿದ ಜೋಗತಿ ಮಂಜಮ್ಮ, ಮನೆಪಟ್ಟಿ, ಮನೆಗಣತಿ, ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪರಿಷ್ಕರಣೆ ಕುರಿತು ಕಾರ್ಯಾಗಾರ ನಡೆಯುತ್ತಿದೆ. ತಪ್ಪು ಮಾಹಿತಿ ನೀಡಬೇಡಿ, ಸರಿಯಾದ ಮಾಹಿತಿ ನೀಡಬೇಕು. ನಿಖರವಾದ ಮಾಹಿತಿ ಕೊಡಿ, ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ. ಮನೆಗೆ ಬಂದ ಜನಗಣತಿ ಸಿಬ್ಬಂದಿಯನ್ನು ಸಂಯಮದಿಂದ ಮಾತನಾಡಿಸಲು ಮನವಿ ಮಾಡಿದರು.

ನಗರದ ಖಾಸಗಿ ಕಾಲೇಜಿನಲ್ಲಿ ಕಾರ್ಯಾಗಾರ ನಡೆಸಿ ಮಾತನಾಡಿದ ಡಿಸಿ ಕವಿತಾ ಮನ್ನಿಕೇರಿ, ಗಣತಿ ಮಾಡಲು ಹೋಗುವ ಸಿಬ್ಬಂದಿ ಕೂಡ ಬಹಳ ಸಂಯಮದಿಂದ ವರ್ತಿಸಿ ಜನರಿಂದ ಮಾತನಾಡಿಸಿ ಮಾಹಿತಿ ಪಡೆಯಿರಿ ಅಂತ ಸಿಬ್ಬಂದಿಗೆ ಡಿಸಿ ಕವಿತಾ ಮನ್ನಿಕೇರಿ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಎಡಿಸಿ ಬಾಲಕೃಷ್ಣ, ಸಿಇಓ, ಮೊಹಮ್ಮದ್ ನೊಂಗ್ಜಾಯ್, ನಗರಾಭಿವೃದ್ಧಿ ಕೋಶದ ಪಿಡಿ ಮನೋಹರ್ ಭಾಗಿಯಾಗಿದ್ದರು.

Edited By :
PublicNext

PublicNext

02/04/2026 12:56 pm

Cinque Terre

10.96 K

Cinque Terre

0

ಸಂಬಂಧಿತ ಸುದ್ದಿ