ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಂಡೂರು ರಸ್ತೆಯಲ್ಲಿರೋ ಅಗ್ನಿಶಾಮಕ ದಳ ಸ್ಟೇಷನ್ ಲ್ಲಿ ನೂತನ ಅಗ್ನಿಶಾಮಕ ವಾಹನಕ್ಕೆ ಶಾಸಕ ಗವಿಯಪ್ಪ ಚಾಲನೆ ನೀಡಿದ್ರು. ವಿಜಯನಗರ ಜಿಲ್ಲೆಗೆ ಎರಡು ವಾಹನ ಮಂಜೂರು ಆಗಿದ್ದು ಒಂದು ಹೊಸಪೇಟೆ ಡಿವಿಜನ್ ಗೆ ಮತ್ತೊಂದು ಹಡಗಲಿ ಡಿವಿಜನ್ ಗೆ ಹಂಚಿಕೆ ಮಾಡಲಾಗಿದೆ.
ಎರಡೂ ವಾಹನಗಳು 6,000 ಸಾವಿರ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿವೆ. ಒಂದು ಅಗ್ನಿಶಾಮಕ ವಾಹನ ಖರೀದಿಗೆ 80 ಲಕ್ಷ ವ್ಯಯಿಸಲಾಗಿದೆ. ಬಳಿಕ ಮಾತಾಡಿದ ಶಾಸಕ ಗವಿಯಪ್ಪ, ಅಗ್ನಿಶಾಮಕ ಸಿಬ್ಬಂದಿಗೆ ಕ್ವಾರ್ಟರ್ಸ್ ಇಲ್ಲ. ಅದರ ಬಗ್ಗೆ ಸರ್ಕಾರಕ್ಕೆ ಪ್ರಪೋಸಲ್ ಕಳುಹಿಸಿದ್ದೇವೆ. ಎಂಟು ಜನ ಸಿಬ್ಬಂದಿ ಕೊರತೆ, ಅದನ್ನೂ ಗೃಹ ಸಚಿವ ಪರಮೇಶ್ವರ ಅವರ ಗಮನಕ್ಕೆ ತಂದು ನೇಮಕಾತಿ ಮಾಡಿಕೊಳ್ಳುತ್ತೇವೆ ಅಂತ ಭರವಸೆ ನೀಡಿದ್ರು.
PublicNext
29/03/2026 03:15 pm
LOADING...