ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: "ಶಾಮನೂರು ಸಾಹೇಬ್ರು, ಮೇಟಿ ಸಾಹೇಬ್ರು ಮಾಡಿದ ಅಭಿವೃದ್ಧಿಯೇ ಕಾಂಗ್ರೆಸ್ ಗೆ ವರದಾನ"

ಕೊಟ್ಟೂರು: ಬೈ ಎಲೆಕ್ಷನ್ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ. ಕಾಂಗ್ರೆಸ್ ಜೋಡೆತ್ತು ಎರಡೂ ಕ್ಷೇತ್ರದಲ್ಲಿ ಗೆಲ್ತಾರೆ. ನಮ್ಮ ಬೈ ಎಲೆಕ್ಷನ್ ನಮಗೆ ಹೆಂಗೆ ವರದಾನ ಆಯ್ತೋ ಹಂಗೆ ಈ ಬೈ ಎಲೆಕ್ಷನ್ ನ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ವರದಾನ ಆಗುತ್ತೆ ಅಂತ ಸಂಸದ ತುಕಾರಾಂ ಹೇಳಿದ್ರು.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹಾರಾಳು ಗ್ರಾಮದಲ್ಲಿ ಮಾತಾಡಿದ ಅವರು, ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವು ಇದೆ. ದಾವಣಗೆರೆ ಕ್ಷೇತ್ರದಲ್ಲಿ ದಿ.ಶಾಮನೂರು ಶಿವಶಂಕ್ರಪ್ಪನವರು ಒಳ್ಳೆಯ ಕೆಲಸ ಮಾಡಿದ್ದಾರೆ‌. ಹೀಗಾಗಿ ಜನ ಕಾಂಗ್ರೆಸ್ ಕೈಹಿಡಿಯುವ ಭರವಸೆ ಇದೆ ಅಂದ್ರು.

ಅತ್ತ ಬಾಗಲಕೋಟೆಯಲ್ಲೂ ಉತ್ತಮ ವಾತಾವರಣ ಇದೆ. ಸಿದ್ದರಾಮಯ್ಯ ಸಾಹೇಬ್ರು, ಡಿಕೆ ಶಿವಕುಮಾರ್ ಸಾಹೇಬ್ರು ಇಬ್ಬರೂ ಪ್ರಚಾರ ಮಾಡ್ತಿದ್ದಾರೆ. ಮೇಟಿ ಸಾಹೇಬ್ರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಎರಡೂ ಕ್ಷೇತ್ರದಲ್ಲಿ ಅಭಿವೃದ್ದಿಯೇ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದೆ. ಎರಡೂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನಸೌಧ ಪ್ರವೇಶ ಮಾಡ್ತಾರೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

Edited By : Manjunath H D
PublicNext

PublicNext

04/04/2026 10:52 pm

Cinque Terre

13.44 K

Cinque Terre

0