ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಪ್ರಧಾನಿ ಮೋದಿ ಅಮೆರಿಕದ ಕೈಗೊಂಬೆ ಆಗಿದ್ದಾರೆ ಅಂತ ಆರೋಪಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ

ಹೊಸಪೇಟೆ : ಅಮೆರಿಕಾ - ಇಸ್ರೇಲ್, ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ತೈಲ ಖರೀದಿ ಮಾಡಬೇಕು ಎಂದರೆ ಅಮೆರಿಕಾ ಹೇಳಿದಂತೆ ಪ್ರಧಾನಿ ನರೇಂದ್ರ ಮೋದಿ ಕೇಳುತ್ತಿದ್ದಾರೆ. ವಿದೇಶದಿಂದ ಖರೀದಿ ಮಾಡಿದ ತೈಲವನ್ನು ಅದಾನಿ, ಅಂಬಾನಿ ಕಂಪನಿಗಳಿಗೆ ತುಂಬಿಸಿಕೊಳ್ಳಲು ಹೇಳುತ್ತಿದೆ. ಬೇರೆ ದೇಶದ ಅಧ್ಯಕ್ಷ ಹೇಳಿದಂತೆ ಭಾರತ ದೇಶದ ಪ್ರಧಾನಿ ಮೋದಿ ಕೇಳುತ್ತಿದ್ದಾರೆ. ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಅಂತ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ನಗರದ ವಿಎನ್'ಸಿ ಕಾಲೇಜು ಮುಂಭಾಗದಿಂದ ನಗರದ ಅಂಬೇಡ್ಕರ್ ಸರ್ಕಲ್ ವರೆಗೆ 100/40 ಉದ್ದ, ಅಗಲದ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ವಿದೇಶದೊಂದಿಗೆ ಹೊಂದಾಣಿಕೆ ಆದ ಪ್ರಧಾನಿ ನರೇಂದ್ರ ಮೋದಿಗೆ ಧಿಕ್ಕಾರ ಅಂತ ಕೂಗಿದರು. ಪ್ರತಿಭಟನೆ ಬಳಿಕ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಹೆಸರು ಎಪ್ಸ್ಟೀನ್ ಫೈಲ್ಸ್ ಪ್ರಕರಣದಲ್ಲಿ ತಳಕು ಹಾಕಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅದನ್ನೇ ಇಟ್ಟುಕೊಂಡು ಅವರು ಹೇಳಿದವರ ಕಡೆಯಿಂದ ತೈಲ ಖರೀದಿ ಮಾಡಬೇಕು ಅಂತ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಬೇರೆ ದೇಶದ ಅಧ್ಯಕ್ಷರು ಹೇಳಿದ್ದನ್ನ ಪ್ರಧಾನಿ ನರೇಂದ್ರ ಮೋದಿ ಯಾಕೆ ಕೇಳಬೇಕು ಅಂತ ಆಕ್ರೋಶ ಹೊರಹಾಕಿದರು.

Edited By :
PublicNext

PublicNext

25/03/2026 03:10 pm

Cinque Terre

10.73 K

Cinque Terre

4

ಸಂಬಂಧಿತ ಸುದ್ದಿ