ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಟ್ಟೂರು: ನಿಯಮ ಉಲ್ಲಂಘನೆ ಹಿನ್ನೆಲೆ; 'ಡೆಲ್ಲಿ ವರ್ಲ್ಡ್ ಸ್ಕೂಲ್' ಪರವಾನಗಿ ರದ್ದು

​​ಕೊಟ್ಟೂರು: ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಅನಧಿಕೃತವಾಗಿ ಪಠ್ಯಕ್ರಮ ಬೋಧಿಸುತ್ತಿದ್ದ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ 'ಡೆಲ್ಲಿ ವರ್ಲ್ಡ್ ಸ್ಕೂಲ್' ಪರವಾನಗಿಯನ್ನು ರದ್ದುಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ.

​ ಈ ಶಾಲೆಯು ಎಲ್‌ಕೆಜಿಯಿಂದ 8ನೇ ತರಗತಿಯವರೆಗೆ ರಾಜ್ಯ ಪಠ್ಯಕ್ರಮದ (State Syllabus) ಆಂಗ್ಲ ಮಾಧ್ಯಮ ಬೋಧನೆಗೆ ಮಾತ್ರ ಅನುಮತಿ ಪಡೆದಿತ್ತು.

​ಆದರೆ, ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿ, ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಶಾಲೆಯಲ್ಲಿ CBSE ಪಠ್ಯಕ್ರಮ ಮತ್ತು NCERT ಪುಸ್ತಕಗಳನ್ನು ಮಕ್ಕಳಿಗೆ ಬೋಧಿಸಲಾಗುತ್ತಿತ್ತು.

​​ಶಾಲೆಯ ಈ ಅಕ್ರಮದ ಕುರಿತು ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‌ನಲ್ಲಿ ಕೂಡ್ಲಿಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅನಧಿಕೃತವಾಗಿ ಸಿಬಿಎಸ್‌ಇ ಪಠ್ಯಕ್ರಮ ಬೋಧಿಸುತ್ತಿರುವುದು ಸಾಬೀತಾಗಿತ್ತು.

​ ಅಕ್ರಮ ಸಾಬೀತಾದ ಹಿನ್ನೆಲೆಯಲ್ಲಿ ಶಾಲಾ ಲೈಸೆನ್ಸ್ ಮತ್ತು ಸಿಬಿಎಸ್‌ಇ ಪಠ್ಯಕ್ರಮಕ್ಕೆ ನೀಡಲಾಗಿದ್ದ ನಿರಾಕ್ಷೇಪಣಾ ಪತ್ರವನ್ನು (NOC) ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

​ಶಾಲೆಯ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಕೂಡಲೇ ಹತ್ತಿರದ ಸರ್ಕಾರಿ ಶಾಲೆಗೆ ಹಸ್ತಾಂತರಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Edited By : Shivu K
PublicNext

PublicNext

02/04/2026 10:28 pm

Cinque Terre

14.42 K

Cinque Terre

0

ಸಂಬಂಧಿತ ಸುದ್ದಿ