ಹೊಸಪೇಟೆ : ದಾವಣಗೆರೆ ಕೈ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಮನವೊಲಿಕೆಗೆ ಸಚಿವ ಜಮೀರ್ ಬಾರದ ವಿಚಾರಕ್ಕೆ ಶಾಸಕ ಗವಿಯಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸಚಿವ ಜಮೀರ್ ಅವರು ಅಲ್ಪಸಂಖ್ಯಾತರ ರಾಜ್ಯ ನಾಯಕರು. ಕೇರಳ ಇಲೆಕ್ಷನ್ ಉಸ್ತುವಾರಿ ನೀಡಿರುವುದರಿಂದ ದಾವಣಗೆರೆಗೆ ಹೋಗಿಲ್ಲ. ಅದನ್ನು ಹೊರತುಪಡಿಸಿ ಅಲ್ಪಸಂಖ್ಯಾತರ ಮುಖಂಡರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೊಸಪೇಟೆಯಲ್ಲಿ ಕೈ ಶಾಸಕ ಹೆಚ್.ಆರ್ ಗವಿಯಪ್ಪ ಹೇಳಿದರು.
ಬೈ ಎಲೆಕ್ಷನ್ ಗೆಲುವು ವಿಚಾರಕ್ಕೂ ಮಾತನಾಡಿ, ಎರಡಕ್ಕೆ ಎರಡೂ ಕ್ಷೇತ್ರ ನಾವೇ ಗೆಲ್ಲುತ್ತೇವೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಶಾಸಕ ಗವಿಯಪ್ಪ ಭರವಸೆ ವ್ಯಕ್ತಪಡಿಸಿದರು.
PublicNext
28/03/2026 03:13 pm
LOADING...