ಹೊಸಪೇಟೆ : ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಹಿನ್ನೆಲೆ ರಾಶಿ, ರಾಶಿ ಕೆಂಪು ಸುಂದರಿ ಕುರಿ, ಮೇಕೆಗಳ ಪಾಲಾಗಿವೆ. ಲೋಡ್ ಗಟ್ಟಲೆ ಟೊಮ್ಯಾಟೋವನ್ನು ರೈತರು ಕುರಿ, ಮೇಕೆಗಳಿಗೆ ಹಾಕಿದ್ದಾರೆ. ನಿತ್ಯ ಮೂರ್ನಾಲ್ಕು ಟ್ರ್ಯಾಕ್ಟರ್ ಲೋಡ್ ಹೊಸಪೇಟೆಯ APMC ಯಿಂದ ಸಣ್ಣ ಪುಟ್ಟ ಮಾರುಕಟ್ಟೆಗಳಿಗೆ ಟೊಮ್ಯಾಟೋ ಹೋಗ್ತಿತ್ತು.
ಆದ್ರೀಗ ಹೊಸಪೇಟೆಯ APMCಗೆ ನಿತ್ಯ ಬರೋ ಟೊಮ್ಯಾಟೋ ಯಾರೂ ಕೂಡ ಖರೀದಿ ಮಾಡ್ತಿಲ್ಲ. ಹೀಗಾಗಿ ಬೆಲೆ ಸಿಗದೇ ಮಾರುಕಟ್ಟೆಗೆ ತಂದ ಟೋಮ್ಯಾಟೋ ಮಾರಾಟ ಆಗದೇ ಇರೋದ್ರಿಂದ ರೈತರು ತರುವ ಮಾಲು, ಎಪಿಎಂಸಿಯಿಂದ ನೇರವಾಗಿ ಕುರಿಹಟ್ಟಿಗಳಿಗೆ ಹೋಗ್ತಿದೆ.
LPG ಸಿಗದೇ ಹೋಟೆಲ್ ಮಾಲೀಕರು ಸಹ ಟೋಮ್ಯಾಟೋ ಖರೀದಿ ಮಾಡೋದು ಕಡಿಮೆ ಮಾಡಿದ್ದಾರೆ. ಚಿಪ್ಸ್ ಗೆ ಖರೀದಿಯಾಗುತ್ತಿದ್ದ ಟೋಮ್ಯಾಟೋ ಕೂಡ ಖರೀದಿಯಾಗ್ತಿಲ್ಲ. ಹೋಟೆಲ್ ಗಳಿಗೆ ಖರೀದಿಯಾಗುತ್ತಿದ್ದ ಟೋಮ್ಯಾಟೋ ಸಂಖ್ಯೆ ಕೂಡ ಕುಸಿತ ಕಂಡಿದೆ.
ಹೀಗಾಗಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಸೇರಿದಂತೆ 5 ತಾಲ್ಲೂಕುಗಳಿಂದ ಹೊಸಪೇಟೆ APMC ಗೆ ಬರುವ ಟೋಮ್ಯಾಟೋಗೆ ಕಿಮ್ಮತ್ತೇ ಇಲ್ಲದಂತಾಗಿದೆ.
ಇದ್ರಿಂದ APMC ಗೆ ಬಂದು ಯಾರೂ ಖರೀದಿ ಮಾಡದ ಕಾರಣ ರೈತರು, ಕುರಿ ಸಾಕಾಣೆದಾರರು ರೈತರಿಂದ ಮಾರಾಟ ಆಗದೇ ಉಳಿದ ಟೋಮ್ಯಾಟೋ, ಈರುಳ್ಳಿ, ಬದನೆಕಾಯಿಯನ್ನು ಟ್ರಾಕ್ಟರ್ ತಂದು ಲೋಡ್ ಮಾಡಿಕೊಂಡು ಕುರಿಹಟ್ಟಿಗಳಿಗೆ ಕುರಿಗಾಯಿಗಳು ಕೊಂಡೊಯ್ಯುತ್ತಿದ್ದಾರೆ.
PublicNext
04/04/2026 03:37 pm
LOADING...