ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರು ಹಾಗೂ ಶಿಕ್ಷಕಿಯರು ಕಳೆದ ಹತ್ತು ತಿಂಗಳಿನಿಂದ ವೇತನವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ವೇತನ ಬಿಡುಗಡೆ ಮಾಡದಿರುವುದು ಅವರ ಬದುಕನ್ನು ಬೀದಿಗೆ ತಂದಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ನೂರಾರು ಅತಿಥಿ ಶಿಕ್ಷಕರು ತಮ್ಮ ಅಳಲನ್ನು ಸರ್ಕಾರಕ್ಕೆ ತಲುಪಿಸುವಂತೆ ಬಿಇಓ ಮೂಲಕ ಮನವಿ ಸಲ್ಲಿಸಿದರು.
ಕೇವಲ ವಿಜಯನಗರ ಜಿಲ್ಲೆಯಷ್ಟೇ ಅಲ್ಲದೆ, ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಕೆಆರ್‌ಡಿಬಿ (ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ) ಅನುದಾನದ ಮೈಕ್ರೋ ಯೋಜನೆಯಡಿ ಬಿಡುಗಡೆಯಾಗಬೇಕಿದ್ದ ಅನುದಾನ ಹತ್ತು ತಿಂಗಳಾದರೂ ಬಿಡುಗಡೆಯಾಗದ ಕಾರಣ ಅತಿಥಿ ಶಿಕ್ಷಕರು ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ. "ಸರ್ಕಾರ ವೇತನ ನೀಡದಿದ್ದರೆ ನಮ್ಮ ಜೀವನ ನಿರ್ವಹಣೆ ಹೇಗೆ? ಕೂಡಲೇ ವೇತನ ಬಿಡುಗಡೆಗೊಳಿಸಿ," ಎಂದು ಶಿಕ್ಷಕರು ಹೊಸಪೇಟೆ ತಾಲ್ಲೂಕು ಶಿಕ್ಷಣಾಧಿಕಾರಿಗಳ ಎದುರು ಅಳಲು ತೋಡಿಕೊಂಡರು. ಈ ವೇತನವನ್ನೇ ನಂಬಿ ಬದುಕು ಸಾಗಿಸುತ್ತಿರುವ ತಮ್ಮ ಸಂಬಳವನ್ನು ಆದಷ್ಟು ಬೇಗನೆ ಬಿಡುಗಡೆ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
PublicNext
27/03/2026 05:08 pm
LOADING...