ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ : ಆಟೋ LPG ದರದಲ್ಲಿ ದಿಢೀರ್ ಏರಿಕೆ - ಅಧಿಕಾರಿಗಳ ಸಂಧಾನ ಬಳಿಕ ಮತ್ತೆ ಯಥಾಸ್ಥಿತಿಗೆ ಮರಳಿದ ಬಂಕ್ ಮಾಲೀಕರು

ಹೊಸಪೇಟೆ : ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕಿನ ಡ್ಯಾಮ್ ರಸ್ತೆಯಲ್ಲಿರುವ ಆಟೋ LPG ಗೋ ಗ್ಯಾಸ್ ಕಂಪನಿಯ ಬಂಕ್ ನಲ್ಲಿ 84.95 ರೂಪಾಯಿ ಇದ್ದ ಒಂದು ಲೀಟರ್ ಆಟೋ LPG ಗ್ಯಾಸ್ ಬೆಲೆಯಲ್ಲಿ ಏಕಾಏಕಿ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ 84.95 ಪೈಸೆಗೆ ಸಿಗುತ್ತಿದ್ದ LPG 99.95 ರೂಪಾಯಿಗೆ ಏರಿಕೆ ಕಂಡಿದ್ದರಿಂದ ಆಟೋ ಯೂನಿಯನ್ ಮುಖಂಡ ಸಂತೋಷ್ ಆಕ್ರೋಶ ಹೊರಹಾಕಿದ್ದಾರೆ.

ಜೊತೆಗೆ ಗೋ ಗ್ಯಾಸ್ ಕಂಪನಿಯ ವಿರುದ್ಧ CITU ನ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಹೊಸಪೇಟೆ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದರು. ಕೂಡಲೇ ಎಚ್ಚೆತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಭೆ ನಡೆಸಿ ಮತ್ತೆ ಮೊದಲಿನ ಬೆಲೆ ಮಾರಾಟ ಮಾಡಬೇಕು ಅಂತ ಸೂಚನೆ ನೀಡಿದ್ದಾರೆ. ಇದರಿಂದ ದಿಢೀರ್ ಏರಿಕೆ ಮಾಡಿದ್ದ 15 ರೂಪಾಯಿಯನ್ನು ಇಳಿಕೆ ಮಾಡಲಾಗಿದೆ. CITU ನ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ ಹೋರಾಟದ ಎಚ್ಚರಿಕೆಗೆ ಮಣಿದಿದ್ದಕ್ಕೆ ಇಲಾಖೆಯ ಎಲ್ಲಾ ಅಧಿಕಾರಿಗಳು, ಬಂಕ್ ನ ಮಾಲೀಕರಿಗೆ CITU ಸಂಘಟನೆ ಧನ್ಯವಾದ ತಿಳಿಸಿದೆ.

Edited By : Vinayak Patil
Kshetra Samachara

Kshetra Samachara

29/03/2026 02:18 pm

Cinque Terre

2.1 K

Cinque Terre

0

ಸಂಬಂಧಿತ ಸುದ್ದಿ