ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ವಿಜಯಶ್ರೀ ರೆಸಾರ್ಟ್ ಬಳಿ ಪದೇ, ಪದೇ ಕರಡಿ ಪ್ರತ್ಯಕ್ಷ, ಸ್ಥಳೀಯರು ಭಯಭೀತ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಕೊಂಡನಾಯಕನಹಳ್ಳಿ ವಿಜಯಶ್ರೀ ರೆಸಾರ್ಟ್‌ ಹತ್ತಿರ ತಡರಾತ್ರಿ ಕರಡಿ ಪ್ರತ್ಯಕ್ಷಗೊಂಡು ಓಡಾಟ ನಡೆಸಿದೆ.

ಕರಡಿ ಪ್ರತ್ಯಕ್ಷವಾದ ಲೇಔಟ್ ನ ಜನ ಆತಂಕಗೊಂಡಿದ್ದಾರೆ. ಕರಡಿ ಓಡಾಟದ ದೃಶ್ಯವನ್ನ ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ಹಿಂದೆಯೂ ಕೂಡಾ ಇದೇ ಲೇಔಟ್ ಬಳಿ ಕರಡಿ ಓಡಾಟ ನಡೆಸಿತ್ತು. ಪದೇ ಪದೇ ಕರಡಿ ಓಡಾಟ ನಡೆಸುತ್ತಿರೋದ್ರ ಜನ ಭಯಗ್ರಸ್ಥರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕರಡಿ ಸೆರೆಹಿಡಿದು ಅರಣ್ಯಕ್ಕೆ ಬಿಡಬೇಕು ಅಂತ ಆಗ್ರಹಿಸಿದ್ರು.

Edited By :
PublicNext

PublicNext

01/04/2026 01:44 pm

Cinque Terre

11.44 K

Cinque Terre

0

ಸಂಬಂಧಿತ ಸುದ್ದಿ