ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ವನ್ಯಜೀವಿಗಳಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಘಟನೆಗಳು ಬೆಳಕಿಗೆ ಬಂದಿವೆ. ತಾಲೂಕಿನಲ್ಲಿ ಕೃಷ್ಣಮೃಗವೊಂದು ಅಸಹಜವಾಗಿ ಸಾವನ್ನಪ್ಪಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಜೀವಂತ ಉಡ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಬಂಧಿಸಿದೆ.
ಜೀವಂತ ಉಡ ಸಾಗಣೆ: ಓರ್ವನ ಬಂಧನ
ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಮತ್ತು ತಾಳೆ ಬಸಾಪುರ ತಾಂಡಾ ನಡುವೆ ಜೀವಂತ ಉಡವನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಚಿಲಕನಹಟ್ಟಿ ಗ್ರಾಮದ ಹನುಮಂತಪ್ಪ ಎಂಬಾತ ತನ್ನ ಬೈಕ್‌ನಲ್ಲಿ ಉಡವನ್ನು ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ಬಿದ್ದಿದೆ. ಕೂಡಲೇ ಪರಿಶೀಲನೆ ನಡೆಸಿದ ಅಧಿಕಾರಿಗಳು, ಹನುಮಂತಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೃಷ್ಣಮೃಗ ಅಸಹಜ ಸಾವು
ಇದೇ ವೇಳೆ, ಹೊಸಪೇಟೆ ತಾಲೂಕಿನ ಶಂಕರ ನಗರ ಕ್ಯಾಂಪ್ ಬಳಿ ಕೃಷ್ಣಮೃಗವೊಂದು ಅಸಹಜವಾಗಿ ಸಾವನ್ನಪ್ಪಿದೆ. ನಾಲಿಗೆ ಕಡಿದುಕೊಂಡು, ರಕ್ತ ಕಾರಿಕೊಂಡು ಮೃತಪಟ್ಟಿರುವ ಕೃಷ್ಣಮೃಗವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯ ನಂತರ, ನ್ಯಾಯಾಲಯದ ಅನುಮತಿ ಪಡೆದು ಅರಣ್ಯದಲ್ಲಿ ದಫನ ಮಾಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
PublicNext
25/03/2026 11:01 am
LOADING...