ಹಡಗಲಿ: ನೀರು ಕಡಿಮೆ ಇದೆ ಜನರನ್ನ ನದಿ ದಾಟಿಸಲು ಟ್ರ್ಯಾಕ್ಟರ್ ಚಾಲಕ ಮುಂದಾಗಿದ್ದಾನೆ. ಈ ವೇಳೆ ಸರಿಸುಮಾರು 15ಕ್ಕೂ ಅಧಿಕ ಜನ ನದಿಯಲ್ಲಿ ಸಿಲುಕಿದ್ದಾರೆ. ಈ ಘಟನೆ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ನವಲಿ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.
ನದಿ ದಾಟುವಾಗ ನದಿಯ ಮಧ್ಯಭಾಗದಲ್ಲಿ ನೀರಿನ ಸೆಳೆತ ಹೆಚ್ಚಾಗಿ ಮುಳುಗುವ ಹಂತಕ್ಕೆ ತಲುಪಿದ್ದ ಟ್ರ್ಯಾಕ್ಟರ್..
ತೆಪ್ಪಗಳೊಂದಿಗೆ ತೆರಳಿ ಎಲ್ಲರನ್ನೂ ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆ ತಂದಿರೋ ಮೀನುಗಾರರು.. ಬ್ರಿಡ್ಜ್ ಮೂಲಕ ಹೋಗಬೇಕಾಗಿದ್ದ ಟ್ರಾಕ್ಟರ್ ಚಾಲಕ, ಬೇಗ ಹೋಗಬೇಕು ಅಂತ ನದಿಗೆ ಟ್ರ್ಯಾಕ್ಟರ್ ನ್ನ ನದಿಗೆ ಇಳಿಸಿದ್ರಿಂದ ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ. ಬಳಿಕ ಮೀನುಗಾರರು ಜೆಸಿಬಿ ಮೂಲಕ ಟ್ರಾಕ್ಟರ್ ನ್ನ ದಡಕ್ಕೆ ಎಳೆದು ತಂದು 10 ಜನರ ಜೀವ ರಕ್ಷಿಸಿದ್ದಾರೆ.
ಚಾಲಕನ ಎಡವಟ್ಟಿನಿಂದ ತುಂಗಭದ್ರಾ ನದಿಯಲ್ಲಿ ಟ್ರ್ಯಾಕ್ಟರ್ ಇಳಿದಾಗ ಏಕಾಏಕಿ ನೀರು ಹೆಚ್ಚಾದ ಕಾರಣ ಚಾಲಕ ಸೇರಿ 10ಕ್ಕೂ ಅಧಿಕ ಜನ ಸಿಲುಕಿದ್ದಾರೆ. ಅಪಾಯದಲ್ಲಿ ಸಿಲುಕಿದ್ದವರನ್ನ ನೋಡಿದ ಮೀನುಗಾರರು ತೆಪ್ಪದಲ್ಲಿ ತೆರಳಿ 10ಕ್ಕೂ ಹೆಚ್ಚು ಜನರ ಜೀವ ರಕ್ಷಣೆ ಮಾಡಿದ್ದಾರೆ. ನದಿ ನೀರಲ್ಲಿ ಮುಳುಗಿದ ಬಾವಿಕಟ್ಟಿ ಗ್ರಾಮದ ಜನ ಟ್ರ್ಯಾಕ್ಟರ್ ಮೂಲಜ ಶಿಂಗಟಾಲೂರು ವೀರಭದ್ರೇಶ್ವರ ಜಾತ್ರೆಗೆ ಹೊರಟಿದ್ರು ಎನ್ನಲಾಗಿದೆ. ಬಳಿಕ ಬದುಕಿಳಿದ ಬಡ ಜೀವ ಅಂತೇಳಿ ಮತ್ತೆ ವೀರಭದ್ರೇಶ್ವರ ಜಾತ್ರೆಗೆ ತೆರಳಿದ್ದಾರೆ.
PublicNext
25/03/2026 12:41 pm
LOADING...