ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ತುಳು ದೈವ ನಿಂದನೆ ಪ್ರಕರಣ - ಮುಸ್ಲಿಂ ಯುವಕರಿಂದ ಕ್ಷಮೆಯಾಚನೆ

ಮಡಿಕೇರಿ: ಕೊಡಗು ಜಿಲ್ಲೆ ಎಮ್ಮೆಮಾಡಿನಲ್ಲಿ ಮದುಮಗನಿಗೆ ದೈವದ ವೇಷ ಹಾಕಿ ಹುಚ್ಚಾಟ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ದೈವವನ್ನ ಅಣಕಿಸಿದ ರೀತಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು.

ಜೊತೆಗೆ ದೈವ ನರ್ತಕರ ಸಂಘ ಕೂಡ ಕೊಡಗು ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದು. ಪ್ರಕರಣದಲ್ಲಿ ಭಾಗಿಯಾಗಿದ್ದ 6 ಮಂದಿ ವಿರುದ್ಧ FIR ಕೂಡ ದಾಖಲಾಗಿತ್ತು.

ಇದರ ಬೆನ್ನಲ್ಲೇ ಆ ಯುವಕರು ಕ್ಷಮೆಯಾಚನೆ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ಮಾಡಿಲ್ಲ ನಮ್ಮ ವಿಡಿಯೋದಿಂದ ಸಮುದಾಯಕ್ಕೆ ನೋವಾಗಿದ್ದಲ್ಲಿ ಕ್ಷಮೆಯಾಚನೆ ಮಾಡಿರೋದಾಗಿ ಯುವಕರು ತಿಳಿಸಿದ್ದಾರೆ‌.

Edited By :
PublicNext

PublicNext

01/04/2026 01:10 pm

Cinque Terre

8.22 K

Cinque Terre

0

ಸಂಬಂಧಿತ ಸುದ್ದಿ