ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ : ಗ್ರಾಹಕರು ಯಾವುದೇ ವಸ್ತು-ಪದಾರ್ಥ ಕೊಳ್ಳುವಾಗ ಎಚ್ಚರ ವಹಿಸಿ: ನಿತಿನ್ ಚಕ್ಕಿ

ಮಡಿಕೇರಿ : ಗುಣಮಟ್ಟದ ಉತ್ಪನ್ನ ಹಾಗೂ ಸೇವೆ ಪ್ರತಿ ಗ್ರಾಹಕರ ಮೂಲಭೂತ ಹಕ್ಕು.. ಗ್ರಾಹಕನೇ ರಾಜ, ಆದರೆ ಹಕ್ಕುಗಳ ಬಗ್ಗೆ ತಿಳುವಳಿಕೆ ಇದ್ದಾಗ ಮಾತ್ರ... ಖರೀದಿಸುವ ಮೊದಲು ಯೋಚಿಸಿ, ಗುಣಮಟ್ಟವನ್ನು ಪರೀಕ್ಷಿಸಿ... ಗ್ರಾಹಕರ ಹಕ್ಕುಗಳ ಅರಿವೇ ಮೋಸದಿಂದ ರಕ್ಷಣೆ... ಈ ಸಂದೇಶವು ನಡೆದ ವಿಶ್ವ ಗ್ರಾಹಕರ ದಿನಾಚರಣೆ ಸಂದರ್ಭದಲ್ಲಿ ಕೇಳಿ ಬಂದವು.

ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕುಶಾಲನಗರ ಇವರ ಸಂಯುಕ್ತಾಶ್ರಯದಲ್ಲಿ ಸುರಕ್ಷಿತ ಉತ್ಪನ್ನಗಳು ಆತ್ಮವಿಶ್ವಾಸದ ಗ್ರಾಹಕರು ಎಂಬ ವಿಷಯದಡಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಮೊಳಗಿತು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಮಾತನಾಡಿ ಸಮಾಜದಲ್ಲಿನ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಗ್ರಾಹಕರಾಗಿದ್ದು, ಗ್ರಾಹಕರ ಸುರಕ್ಷತೆ, ಮಾಹಿತಿ ಮತ್ತು ನ್ಯಾಯಸಮ್ಮತ ಸೇವೆ ದೊರಕುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

.

Edited By : PublicNext Desk
Kshetra Samachara

Kshetra Samachara

02/04/2026 07:02 am

Cinque Terre

340

Cinque Terre

0

ಸಂಬಂಧಿತ ಸುದ್ದಿ