ಕೊಡಗು : ಕಳೆದ ಕೆಲ ತಿಂಗಳ ಹಿಂದೆ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಊರಿನ ಪ್ರಮುಖ ರಸ್ತೆಗಳಲ್ಲಿ ದ್ವನಿ ವರ್ಧಕವನ್ನು ಬಳಸಿಕೊಂಡು ಪ್ರಚಾರ ಮಾಡುವ ಸಂದರ್ಭದಲ್ಲಿ ಕೆಲ ಮುಸ್ಲಿಂ ಯುವಕರು ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ರು. ಈ ಹಿನ್ನೆಲೆಯಲ್ಲಿ ಅದೇ ಈ ಊರಿನಲ್ಲಿ ಹಿಂದೂಗಳ ಶಕ್ತಿ ಪ್ರದರ್ಶನವನ್ನು ಮಾಡುತ್ತೇವೆ ಎಂದು ಹಿಂದೂ ಕಾರ್ಯಕರ್ತರು ಸವಾಲು ಹಾಕಿದ್ರು ಅದರಂತೆ ನಾಪೋಕ್ಲು ಪಟ್ಟಣದಲ್ಲಿ ಸುಮಾರು ಎರಡು ಸಾವಿರಕ್ಕೂ ಅದಿಕ ಹಿಂದೂ ಕಾರ್ಯಕರ್ತರು ನಾಪೋಕ್ಲು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಹಿಂದೂಗಳ ಶಕ್ತಿ ಪ್ರದರ್ಶನ ತೋರಿದ್ರು.
ದಿಕ್ಸೂಚಿ ಭಾಷಣ ಮಾಡಿದ ಶ್ರೀಕಾಂತ್ ಕಾರ್ಕಾಳ ಅವರು ಟಿಪ್ಪುಸುಲ್ತಾನ್‌ನಂತಹ ರಾಜನನ್ನೇ ಕೊಡಗಿನ ಧೀರರು 33 ಬಾರಿ ಹಿಮ್ಮೆಟ್ಟಿಸಿದ್ದರು. ಸೋಲು-ಸವಾಲನ್ನು ಮೀರಿ ಇಲ್ಲಿನ ಜನರು ಬಲಶಾಲಿಯಾಗಿದ್ದಾರೆ. ನಾಪೋಕ್ಲಿನ ಮಣ್ಣಿನಲ್ಲಿ ಹಿಂದೂ ಸಮಾಜವನ್ನೇ ಕೆಣಕುವ ಕೆಲಸವಾಗುತ್ತಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಮತಾಂಧ ಶಕ್ತಿಗಳಿಗೆ ಕೆಲವರ್ಷಗಳಿಂದ ಭಯಪಡಬೇಕಾದ ಪರಿಸ್ಥಿತಿ ತಲೆದೋರಿದೆ ಎಂದು ಕಳವಳ ವ್ಯಕ್ತಪಡಿಸಿದರು. ಹೊರಗಿನಿಂದ ಶಕ್ತಿಯಿಂದ ನಾವು ಸೋಲುತ್ತಿಲ್ಲ. ಬದಲಾಗಿ ನಮ್ಮ ಜೊತೆಯಲ್ಲಿದ್ದುಕೊಂಡೆ ನಮ್ಮನ್ನು ಆಂತರಿಕವಾಗಿ ಕುಗ್ಗಿಸುವ ಕೆಲಸ ನಡೆಯುತ್ತಿದೆ. ನಾವೇ ಆಶ್ರಯ ನೀಡಿದವರು ಇದೀಗ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ.
ಜಾತಿ ಹೆಸರಿನಲ್ಲಿ ವಿಷಬೀಜ ಬಿತ್ತಿ ವೈಷಮ್ಯ ಮೂಡಿಸುವ ಕೆಲಸವಾಗುತ್ತಿದೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ನಾವೆಲ್ಲ ಹಿಂದೂ ಒಂದು ಎಂಬ ಧ್ಯೇಯ ಹೊಂದಬೇಕು ಎಂದು ಕರೆ ನೀಡಿದರು. ಅಪ್ಪಚ್ಚಿರ ಗೌತಮ್ ಮೇಲೆ ಹಲ್ಲೆಯಾದ ದಿನವಾದ ಫೆ. 27 ರಂದು ಪ್ರತಿವರ್ಷ ಹಿಂದೂ ಜಾಗೃತಿ ಸಮಾವೇಶವನ್ನು ನಾಪೋಕ್ಲಿನಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹಿಂದೂ ಸುರಕ್ಷಾ ಸಮಿತಿ ಸಂಚಾಲಕ ಕರವಂಡ ಲವ ನಾಣಯ್ಯ ಘೋಷಿಸಿದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಫೆ. 28 ರಂದು ಬಲ್ಲಮಾವಟಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಪ್ರಚಾರ ಕಾರ್ಯ ನಡೆಯುವ ಸಂದರ್ಭ ಅಪ್ಪಚ್ಚಿರ ಗೌತಮ್ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಹಿಂದೂ ಜನರ ಅಸ್ಮಿತೆಗೆ ಬಿದ್ದ ಏಟಾಗಿದ್ದು, ತಕ್ಷಣ ಒಗ್ಗೂಡಿ ರಸ್ತೆ ತಡೆ ನಡೆಸಿ ಸೆಕ್ಷನ್ 307 ಅಡಿ ಪ್ರಕರಣ ದಾಖಲಿಸಲು ಒತ್ತಾಯಿಸಿ ಮುತ್ತಿಗೆ ಹಾಕುವ ಎಚ್ಚರಿಕೆ ನಂತರ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಅವರುಗಳಿಗೆ ವಾರದಲ್ಲಿ ಜಾಮೀನು ದೊರೆತಿರುವುದು ನೋವಿನ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಮುಂಜಾಗ್ರತಾ ಕ್ರಮವಾಗಿ ನಾಪೋಕ್ಲು ಪಟ್ಟಣದಲ್ಲಿ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು..
Kshetra Samachara
02/04/2026 06:52 am