ಮಂಗಳೂರು: ಮೀನು ಹಿಡಿಯಲೆಂದು ಫಲ್ಗುಣಿ ನದಿಗೆ ಸಣ್ಣ ದೋಣಿಯಲ್ಲಿ ತೆರಳಿದ್ದ ಮೂವರು ಯುವಕರಲ್ಲಿ ಇಬ್ಬರು ನೀರುಪಾಲಾದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಕುಂಜತ್‌ಬೈಲಿನಲ್ಲಿ ನಡೆದಿದೆ.
ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ (28) ಹಾಗೂ ರಾಯಲ್ (27) ಎಂಬವರು ನೀರುಪಾಲಾದವರು.
ನಸುಕಿನ ವೇಳೆ 1:30 ಗಂಟೆ ಸುಮಾರಿಗೆ ಮೀನು ಹಿಡಿಯಲೆಂದು ಸಣ್ಣ ದೋಣಿಯಲ್ಲಿ ತೆರಳಿದ್ದರು. ಆದರೆ ನದಿಯ ಮಧ್ಯದಲ್ಲಿದ್ದಾಗ ಮೂವರು ಕೂಡ ದೋಣಿ ಮಗುಚಿ ನೀರಿಗೆ ಬಿದ್ದಿದ್ದು ಈಜಲು ಬಾರದ ಗಣೇಶ (28) ಹಾಗೂ ರಾಯಲ್ (24) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಿತೇಶ್ (29) ಎಂಬವರು ಈಜಿ ದಡ ಸೇರಿದ್ದಾರೆ. ನದಿಯಲ್ಲಿ ಮುಳುಗಿದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಮಧ್ಯಾಹ್ನ ವೇಳೆಗೆ ಪತ್ತೆ ಮಾಡಿದ್ದು ಗಣೇಶ ಮೃತದೇಹ ಸಿಕ್ಕಿದೆ. ರಾಯಲ್ ಎಂಬಾತನ ಪತ್ತೆಗೆ ಶೋಧ ಕಾರ್ಯ ನಡೆದಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
01/04/2026 03:49 pm
LOADING...