ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಮೂರು ದಿನಗಳ ಬಳಿಕ ಬಾವಿಯೊಳಗಿಂದ ಪವಾಡ ಸದೃಶರಾಗಿ ಬದುಕಿ ಬಂದ ವೃದ್ಧ!

ಉಡುಪಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೂರು ದಿನಗಳ ಕಾಲ ಜೀವ ಕೈಯಲ್ಲಿ ಹಿಡಿದುಕೊಂಡಿದ್ದ ವ್ಯಕ್ತಿ ಕೊನೆಗೂ ಪವಾಡ ಸದೃಶರಾಗಿ ಬದುಕಿಬಂದ ಘಟನೆ ಆದಿ ಉಡುಪಿಯ ಕಂಬಳಕಟ್ಟೆಯಲ್ಲಿ ಸಂಭವಿಸಿದೆ. ಕಂಬಳಕಟ್ಟೆಯ ನಿವಾಸಿ ಶ್ರೀನಿವಾಸ ಆಚಾರ್ಯ (62 ) 20 ಅಡಿ ಆಳದ ನೀರಿರುವ ಬಾವಿಗೆ ಬಿದ್ದು ಮೂರು ದಿನ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಗೆದ್ದು ಬಂದಿದ್ದಾರೆ.

ಹೌದು ಒಬ್ಬಂಟಿಯಾಗಿರುವ ಆಚಾರ್ಯರಿಗೆ ಕಳೆದ ಎರಡು ತಿಂಗಳ ಹಿಂದೆ ಆರೋಗ್ಯ ಸಮಸ್ಯೆ ಕಾಡಿದ್ದು, ಬಳಿಕ ಗುಣಮುಖರಾಗಿದ್ದರು. ತನ್ನ ಮನೆ ಮುಂದಿನ 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಗೆ ಕಸ ಬಿದ್ದು ಪಂಪ್ ಮೂಲಕ ನೀರು ಸರಿಯಾಗಿ ಬಾರದ ಕಾರಣ ಪಂಪ್ ಫುಟ್‌ಬಾಲ್ ಪೈಪಿಗೆ ಕಟ್ಟಿದ್ದ ಹಗ್ಗವನ್ನು ಮೇಲಕ್ಕೆಳೆಯಲು ಮುಂದಾದಾಗ ಹಗ್ಗ ತುಂಡಾಗಿ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ.

ಬಾವಿಯ ನೀರಿನಲ್ಲಿ ಮುಳುಗಿದರೂ ಜೀವ ಉಳಿಸಿಕೊಳ್ಳಲು ಪರದಾಡಿದ್ದ ಅವರ ಕೈಗೆ ಬಾವಿಯೊಳಗಿದ್ದ ಫುಟ್ ಬಾಲ್ ಪೈಪ್ ಹಾಗೂ ಅದಕ್ಕೆ ಕಟ್ಟಿದ್ದ ಹಗ್ಗ ಸಿಕ್ಕಿದ್ದು, ಅದನ್ನು ಹಿಡಿದುಕೊಂಡೇ ಜೀವ ರಕ್ಷಣೆಗಾಗಿ ಬೊಬ್ಬೆ ಹಾಕಿದ್ದರು. ಯಾರಿಗೂ ಕೇಳಿರಲಿಲ್ಲ.

ಆದರೆ ಅವರ ಪತ್ತೆಗೆ ಕಾರಣವಾಗಿದ್ದು ಗ್ಯಾಸ್ ಹೌದು ಶ್ರೀನಿವಾಸ್ ಅವರು ಗ್ಯಾಸ್ ಬುಕ್ ಮಾಡಿದ್ದರೂ ತಡವಾಗಿದ್ದರಿಂದ ತನ್ನ ಪರಿಚಯಸ್ಥರಾದ ಗಣೇಶ್ ಎಂಬವರ ಬಳಿಯಿಂದ ಗ್ಯಾಸ್ ಸಿಲಿಂಡರ್ ಪಡೆದಿದ್ದರು. ಬಳಿಕ ಗಣೇಶ್ ಅವರಿಗೆ ಗ್ಯಾಸ್ ಸಿಲಿಂಡರ್ ಅಗತ್ಯ ಬಿದ್ದಾಗ ಶ್ರೀನಿವಾಸ್ ಅವರಿಗೆ ಕರೆ ಮಾಡಿ ಗ್ಯಾಸ್ ಕೇಳಿದಾಗ ತಾನು ಬುಕ್ ಮಾಡಿದ್ದ ಗ್ಯಾಸ್ ಸಿಲಿಂಡರ್ ಬಂದಿಲ್ಲ ಬಂದ ಮೇಲೆ ನೀಡುವುದಾಗಿ ಹೇಳಿದ್ದರು. ಮೂರ್ನಾಲ್ಕು ದಿನಗಳ ಬಳಿಕ ಗ್ಯಾಸ್ ಏಜೆನ್ಸಿಗೆ ಕರೆ ಮಾಡಿ ಭಟ್ಟರಿಗೆ ಗ್ಯಾಸ್ ಸಿಲಿಂಡರ್ ಒಂದು ಆದಷ್ಟು ಬೇಗದಲ್ಲಿ ನೀಡುವಂತೆ ಮನವಿ ಮಾಡಿದ್ದರು. ಆಗ ಗ್ಯಾಸ್ ಸಿಬ್ಬಂದಿ ಅವರ ಮನೆಗೆ ತೆರಳಿ ಎರಡು ದಿನಗಳಾಗಿದ್ದು ಮನೆಯಲ್ಲಿ ಭಟ್ಟರು ಇರಲಿಲ್ಲ ಎಂದು ಹೇಳಿದ್ದರು. ಇದರಿಂದ ಸಂಶಯಗೊಂಡ ಗಣೇಶ್ ಅವರು ಶ್ರೀನಿವಾಸ ಅವರ ಮನೆಯಿಂದ 90 ಮೀ. ದೂರದಲ್ಲಿದ್ದ ತನ್ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದವರಿಗೆ ಕರೆ ಮಾಡಿ ಶ್ರೀನಿವಾಸ ಅವರ ಮನೆಯತ್ತ ತೆರಳಿ ಪರಿಶೀಲಿಸುವಂತೆ ಹೇಳಿದ್ದರು.

ಬಾಡಿಗೆ ಮನೆಯಲ್ಲಿದ್ದವರು ಶ್ರೀನಿವಾಸ ಅವರನ್ನು ಮನೆಯ ಸುತ್ತ ಹುಡುಕಾಡಿ ಬಳಿಕ ಸಂಶಯದಿಂದ ಬಾವಿಯಲ್ಲಿ ನೋಡಿದಾಗ ಮೂರು ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಶ್ರೀನಿವಾಸ ಆಚಾರ್ಯರು ಬದುಕಿರುವ ವಿಚಾರ ತಿಳಿದು ಕೂಡಲೇ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡುತ್ತಿದ್ದಂತೆ ಅವರು ಬಂದು ಶ್ರೀನಿವಾಸ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸೇರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Edited By : Vinayak Patil
PublicNext

PublicNext

06/04/2026 10:01 pm

Cinque Terre

23.59 K

Cinque Terre

0

ಸಂಬಂಧಿತ ಸುದ್ದಿ