ಮುಲ್ಕಿ: ಅವಿಭಾಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಚೆಕ್ ಪೋಸ್ಟ್ ಬಳಿ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು. ಚಾಲಕರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಪಿಕಪ್ ಚಾಲಕ ಅಜೆಕಾರು ನಿವಾಸಿ ಪ್ರವೀಣ್ ಎಂಬವರು ಬಪ್ಪನಾಡು ಚೆಕ್ ಪೋಸ್ಟ್ ಬಳಿ ನಿಯಂತ್ರಣ ತಪ್ಪಿ ಪಿಕಪ್ ಸ್ಯಾಂಟ್ರೋ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸ್ಯಾಂಟ್ರೋ ಕಾರ್
ನ ಚಾಲಕ ಉದ್ಯಾವರ ನಿವಾಸಿ ಸುಧೇಶ್ ರವರು ನಿಯಂತ್ರಣ ತಪ್ಪಿ ಎದುರು ಭಾಗದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಬ್ರೆಸ್ಟಾ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಯಾಂಟ್ರೋ ಕಾರ್ ನ ಎದುರು ಹಾಗೂ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು. ಪಿಕಪ್ ಹಾಗೂ ಬ್ರೆಸ್ಟಾ ಕಾರಿಗೆ ಅಲ್ಪಸ್ವಲ್ಪ ಹಾನಿ ಉಂಟಾಗಿದೆ. ಅಪಘಾತದ ಸಂದರ್ಭ ಬ್ರೆಸ್ಟಾ ಕಾರಿನ ಚಾಲಕ ಚೇತನ್ ಅಪಾಯದಿಂದ ಪಾರಾಗಿದ್ದಾರೆ.
ಬಪ್ಪನಾಡು ಚೆಕ್ ಪಾಯಿಂಟ್ ಬಳಿ ಅಪಘಾತ ತಡೆಗೆ ಇರಿಸಿದ ಬ್ಯಾರಿಕೇಡ್ ನಿಂದ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
PublicNext
06/04/2026 10:22 pm
LOADING...