ಚಿಕ್ಕಮಗಳೂರು: ಬೊಂಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್-ಮ್ಯಾಗ್ನೆಟ್ ಯೋಜನೆಯಡಿ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಐಡಿಎಸ್ಓ ಸಂಘಟನೆ, ವಿದ್ಯಾರ್ಥಿಗಳು ಹಾಗೂ ಪೋಷಕರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಗ್ರಾಮ ಪಂಚಾಯಿತಿಗೊಂದು ಶಾಲೆ ಮಾಡುವ ಹೆಸರಿನಲ್ಲಿ ರಾಜ್ಯಾದ್ಯಂತ ಸುಮಾರು 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಸಂಘಟನಾಕಾರರಾದ ಅಭಿಷೇಕ್ ಅವರು ಮಾತನಾಡಿ, ಬೊಂಬೈಲು ಶಾಲೆಯ ಮಕ್ಕಳು ಶಿಕ್ಷಣಕ್ಕಾಗಿ ಏಳು ಕಿಲೋಮೀಟರ್ ದೂರದ ಮೈಲಿಮನೆಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಪ್ರದೇಶದ ಮಕ್ಕಳು ಇದುವರೆಗೆ ಸರಿಯಾದ ಬಸ್ ಸೌಕರ್ಯವನ್ನೇ ಕಂಡಿಲ್ಲದಿರುವಾಗ ಇಷ್ಟು ದೂರ ಪ್ರಯಾಣಿಸಿ ಶಿಕ್ಷಣ ಪಡೆಯುವುದು ಹೇಗೆ ಎಂದು ಅವರು ಪ್ರಶ್ನಿಸಿದರು.
PublicNext
04/04/2026 08:01 pm
LOADING...