ಬೆಂಗಳೂರಲ್ಲಿ ಕ್ಷಣ ಕ್ಷಣಕ್ಕೂ ಆಟೋ ಚಾಲಕರ ಪರಿಸ್ಥಿತಿ ಬಿಗಡಾಯಿಸ್ತಿದೆ. ಆಟೋ ಗ್ಯಾಸ್ ಗಾಗಿ ಚಾಲಕರ ಪರದಾಟ ಮುಂದುವರಿದಿದ್ದು ಬಾಣಸವಾಡಿಯಲ್ಲೂ ನೂರಾರು ಆಟೋಗಳು ಕ್ಯೂ ನಿಂತಿದ್ದವು. ಗ್ಯಾಸ್ ಗಾಗಿ ಬೃಹತ್ ಸರತಿ ಸಾಲಿನಲ್ಲಿ ಆಟೋ ನಿಂತಿದ್ದು ಒಬ್ಬೊಬ್ಬರದ್ದು ಒಂದೊಂದು ಕರುಣಾಜನಕ ಕಥೆ ಇದೆ.
ಇನ್ನೇನು ಕೆಲವೇ ದಿನಗಳಲ್ಲಿ ಶೈಕ್ಷಣಿಕ ವರ್ಷ ಆರಂಭ ಆಗುತ್ತೆ. ಮಕ್ಕಳ ಫೀಸ್ ಕಟ್ಟಬೇಕು..ಹಣ ಎಲ್ಲಿಂದ ತರೋದು ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಕೆಲವರು ರಾತ್ರಿ ಕಿಲೋಮೀಟರ್ ಗಟ್ಟಲೆ ಕ್ಯೂ ನಲ್ಲಿ ನಿಂತಿದ್ದಾರೆ. ಇನ್ನು ಅಯ್ಯಪ್ಪ ನಗರದಲ್ಲಿಯೂ ಇದೇ ರೀತಿ ಚಿತ್ರಣ ಕಂಡು ಬಂದಿದೆ.
PublicNext
05/04/2026 04:47 pm
LOADING...