ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿನ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂಗಳ ಮೇಲೆ ಕೇಸ್ ಹಾಕಿದ್ದಾರೆ. ಅದನ್ನು ವಾಪಸ್ ಪಡೆಯಬೇಕು, ಇಲ್ಲವಾದ್ರೆ ಹುಬ್ಬಳ್ಳಿ ಬಂದ್ ಮಾಡ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಎಸ್‌ಎಸ್‌ಕೆ ಸಮಾಜ ಮತ್ತು ಹಿಂದೂ ಪರ ಸಂಘಟನೆ ಸಭೆ ಮಾಡಿದ್ದು, ಹಿಂದೂ ಯುವತಿಗೆ ಅನ್ಯಾಯವಾಗಿದೆ. ನ್ಯಾಯ ದೊರೆಯುವವರೆಗೂ ನಾವು ಬಿಡುವುದಿಲ್ಲ. ಪೊಲೀಸ್ ಕಮಿಷನರ್‌ಗೆ ಕೂಡ ಮನವಿ ಮಾಡುತ್ತೇವೆ. 60 ಮಂದಿ ಹಿಂದೂಗಳ ಮೇಲೆ ಹಾಕಿದ ಕೇಸ್ ಹಿಂಪಡೆಯಬೇಕು. ಅವನಿಗೆ ಹೊಡೆದಿದ್ದು ತಪ್ಪಲ್ಲ, ಹೊಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಇಲ್ಲವಾದ್ರೆ ಬೇರೆನೇ ಮಾಡ್ತಿದ್ವಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/04/2026 08:05 pm
LOADING...