ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ - ಯುವತಿಗೆ ಬ್ಲಾಕ್ ಮೇಲ್ ಮಾಡಿ ಪೋನ್ ಪೇ ಮೂಲಕ ಲಕ್ಷಾಂತರ ರೂ. ಹಣ ಪಡೆದಿದ್ದ ಸಮೀರ್ ಮುಲ್ಲಾ

ಹುಬ್ಬಳ್ಳಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಆಗುತ್ತಿದೆ. ಆರೋಪಿ ಸಮೀರ್ ಮುಲ್ಲಾ ಸಂತ್ರಸ್ತೆ ಖುಷಿ ಕಲಬುರಗಿಯನ್ನು ಬ್ಲ್ಯಾಕ್‌ ಮೇಲ್ ಮಾಡಿ ಪೋನ್ ಪೇ ಮೂಲಕ ಲಕ್ಷಾಂತರ ರೂ. ಹಣ ಪಡೆದಿರುವ ಸ್ಕ್ರೀನ್‌ಶಾಟ್‌ಗಳು ಪಬ್ಲಿಕ್ ನೆಕ್ಸ್ಟ್‌ಗೆ ದೊರೆತಿವೆ.

ಸಮೀರ್ ಮುಲ್ಲಾ ಮತ್ತು ಹಿಂದೂ ಯುವತಿ ಖುಷಿ ಲವ್ ಜಿಹಾದ್ ಪ್ರಕರಣ ಇಡೀ ರಾಜ್ಯದಲ್ಲೇ ಸದ್ದು ಮಾಡುತ್ತಿದೆ. ಪ್ರೀತಿ ನೆಪದಲ್ಲಿ ಸ್ನೇಹ ಮಾಡಿ, ಅತ್ಯಾಚಾರ ಎಸಗಿ ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೆ, ಗರ್ಭನಿರೋಧಕ ಔಷಧ ಕೂಡ ನೀಡಿದ್ದ, ಆರೋಪಿ ಸಮೀರ್‌ನ ಮತ್ತೊಂದು ಮುಖವಾಡ ಬಯಲಾಗಿದೆ. ಖುಷಿ ಎಂಬ ಯುವತಿಯಿಂದ ಬ್ಲ್ಯಾಕ್ ಮೇಲ್ ಮಾಡಿ ಪೋನ್ ಪೇ ಮೂಲಕ ಲಕ್ಷಾಂತರ ರೂ. ಹಣವನ್ನು ಹಾಕಿಸಿಕೊಂಡಿದ್ದಾನೆ. ಈಗ ಆ ಪೋಟೋಗಳು ಪಬ್ಲಿಕ್ ನೆಕ್ಸ್ಟ್‌ಗೆ ದೊರೆತಿವೆ.

ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/04/2026 10:59 pm

Cinque Terre

21.85 K

Cinque Terre

8

ಸಂಬಂಧಿತ ಸುದ್ದಿ