ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಮತ್ತೊಂದು ಲವ್ ಜಿಹಾದ್ ಕೇಸ್ : ಹುಡುಗಿ ದೂರು ನೀಡಿದ ಬೆನ್ನಲ್ಲೇ ಹಳೇ ವಿಡಿಯೋ ವೈರಲ್

ಹುಬ್ಬಳ್ಳಿ ಬ್ರೇಕಿಂಗ್ ನ್ಯೂಸ್...

ಹುಬ್ಬಳ್ಳಿ ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕಾಣುತ್ತಿದೆ. ನಿನ್ನೆ ಕೇಶ್ವಾಪುರ ಠಾಣೆಯಲ್ಲಿ ಸಹನಾ ಎಂಬ ಯುವತಿ ಮುಪಿಜ್ ಎಂಬ ಮುಸ್ಲಿಂ ಯುವಕ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಆದ್ರೆ ಈ ಹಿಂದೆ ಇದೇ ಯುವತಿ ಮಾಡಿದ್ದು ಅಂತ ಹೇಳಲಾಗಿರೋ ಅನೇಕ ವಿಡಿಯೋಗಳು ದೂರು ನೀಡುತ್ತಿದ್ದಂತೆ ವೈರಲ್ ಆಗುತ್ತಿವೆ.

ಹೌದು... ನಾವಿಬ್ಬರು ಇಷ್ಟಪಟ್ಟಿದ್ದೆವು ಧಾರವಾಡ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದೆವು. ನಾನು ನೋಂದಣಿಗೆ ಸಹಿ ಮಾಡಿದ್ದು ಆರ್‌ಎಸ್ಎಸ್ ನವರಿಗೆ ಗೊತ್ತಾಗಿತ್ತು, ಹೀಗಾಗಿ ನಮ್ಮ ಮನೆಗೆ ಬಂದು ಅನೇಕ ಬಾರಿ ಕೌನ್ಸಿಲಿಂಗ್ ಮಾಡಿದ್ದರು. ಅವರ ಧರ್ಮ ಬೇರೆ ನಮ್ಮ ಧರ್ಮ ಬೇರೆ ಅಂತ ಹೇಳಿದ್ರು, ನಾನು ಮುಪಿಜ್ ಮದುವೆಯಾಗದೇ ಇದ್ರೆ ಸಾಯ್ತೇನಿ ಅಂತ ಹೇಳಿದ್ದೆ, ಹೀಗಾಗಿ ಆತನ ಹೆತ್ತವರು ಮದುವೆಗೆ ಒಪ್ಪಿಕೊಂಡಿದ್ದರು.‌ ಆರ್‌ಎಸ್ಎಸ್ ನವರು ಬಂದು ಅನೇಕ ಬಾರಿ ಕೌನ್ಸಿಲಿಂಗ್ ಮಾಡಿದ್ದಾರೆ.‌ ಮುಪಿಜ್ ಮೇಲೆ ಕೇಸ್ ಹಾಕಿಸ್ತೇವೆ ಅಂತ ಹೇಳಿದ್ರು, ಆತನ ಮೇಲೆ ಕೇಸ್ ಹಾಕಲು ನನ್ನ ಒಪ್ಪಿಗೆ ಇಲ್ಲಾ ಅಂದಿರೋ ಯುವತಿಯ ವರ್ಷದ ಹಿಂದೆ ಮಾಡಲಾಗಿರುವ ವಿಡಿಯೋ ವೈರಲ್ ಆಗಿದೆ. ಆದ್ರೆ ಇದೇ ಯುವತಿಯಿಂದ ಇದೀಗ ಮುಪಿಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.‌

ಈರಣ್ಣ ವಾಲಿಕಾರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/04/2026 09:02 pm

Cinque Terre

29 K

Cinque Terre

7

ಸಂಬಂಧಿತ ಸುದ್ದಿ