ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ದಂಪತಿಗೆ ಅಶ್ಲೀಲ ಸಂದೇಶಗಳ ಕಿರುಕುಳ: ಪ್ರಕರಣ ದಾಖಲು

ಚಿಕ್ಕಮಗಳೂರು: ತಾಲ್ಲೂಕಿನ ಅಂಬಳೆ ಹೋಬಳಿ ಗಿಡ್ಡೆನಹಳ್ಳಿ ಗ್ರಾಮದ ನಿವಾಸಿ ಗೋವಿಂದೇಗೌಡ ಅವರು ತಮ್ಮ ಹಾಗೂ ತಮ್ಮ ಪತ್ನಿಯ ಮೊಬೈಲ್ ಸಂಖ್ಯೆಗಳಿಗೆ ನಿರಂತರವಾಗಿ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿರುವ ವ್ಯಕ್ತಿಯ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳೆದ 2025ರ ಮೇ ತಿಂಗಳಿನಿಂದ ಗೋವಿಂದೇಗೌಡರ ಜಿಯೋ ಸಂಖ್ಯೆಗೆ ಹಾಗೂ ನವೆಂಬರ್ ತಿಂಗಳಿನಿಂದ ಅವರ ಪತ್ನಿ ಭವ್ಯ ಅವರು ಬಳಸುತ್ತಿರುವ ಏರ್‌ಟೆಲ್ ಸಂಖ್ಯೆಗೆ 9025682598 ಎಂಬ ಮೊಬೈಲ್ ಸಂಖ್ಯೆಯಿಂದ ಅಸಭ್ಯ ಪೋಟೋ ಮತ್ತು ವಿಡಿಯೋಗಳು ಬರುತ್ತಿವೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಆರೋಪಿತ ವ್ಯಕ್ತಿಯ ಸಂದೇಶಗಳನ್ನು ಹಲವಾರು ಬಾರಿ ಬ್ಲಾಕ್ ಮಾಡಿದರೂ ಸಹ ಬೇರೆ ಬೇರೆ ರೀತಿಯಲ್ಲಿ ಅಶ್ಲೀಲ ಮಾಹಿತಿ ರವಾನಿಸುವುದು ಮುಂದುವರೆದಿದ್ದು, ಇದರಿಂದ ದಂಪತಿಗಳು ತೀವ್ರ ಮಾನಸಿಕ ಕಿರಿಕಿರಿ ಮತ್ತು ತೊಂದರೆ ಅನುಭವಿಸುವಂತಾಗಿದೆ. ಈ ಸಂಬಂಧ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

05/04/2026 10:54 pm

Cinque Terre

400

Cinque Terre

0

ಸಂಬಂಧಿತ ಸುದ್ದಿ