ಚಿಕ್ಕಮಗಳೂರು: ನಗರದ ಐ.ಜಿ. ರಸ್ತೆಯಲ್ಲಿ ನಡೆದ ಎ.ಆರ್. ಫರ್ನಿಚರ್ ಅಂಗಡಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅನಿರೀಕ್ಷಿತ ಸತ್ಯವನ್ನ ಹೊರಹಾಕಿದ್ದಾರೆ. ಈ ಬೆಂಕಿ ಆಕಸ್ಮಿಕವಾಗಿ ಸಂಭವಿಸಿದ್ದಲ್ಲ, ಬದಲಿಗೆ ವ್ಯಾಪಾರ ದ್ವೇಷದ ಹಿನ್ನೆಲೆಯಲ್ಲಿ ನಡೆದ ವ್ಯವಸ್ಥಿತ ಕೃತ್ಯ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಕಳೆದ ಭಾನುವಾರ ನಡೆದ ಈ ದುರ್ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿದ್ದವು.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಎ.ಆರ್. ಫರ್ನಿಚರ್ ಪಕ್ಕದಲ್ಲೇ ಇರುವ ಮತ್ತೊಂದು ಫರ್ನಿಚರ್ ಅಂಗಡಿ ಮಾಲೀಕ ಸಂಚು ರೂಪಿಸಿರುವುದು ಕಂಡುಬಂದಿದೆ. ತನ್ನ ಅಂಗಡಿಗಿಂತ ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂಬ ಅಸೂಯೆಯಿಂದ ಈ ಕೃತ್ಯ ಎಸಗಿದ್ದಾನೆ. ಇದಕ್ಕಾಗಿ ಇಬ್ಬರಿಗೆ 20 ಸಾವಿರ ರೂಪಾಯಿ ಸುಪಾರಿ ನೀಡಿ ಬೆಂಕಿ ಹಚ್ಚಿಸಿದ್ದಾನೆ. ಪ್ರಸ್ತುತ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಕೃತ್ಯದಲ್ಲಿ ಭಾಗಿಯಾದ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
Kshetra Samachara
04/04/2026 09:48 am
LOADING...