ಚಿಕ್ಕಮಗಳೂರು: ಸಿನಿಮೀಯ ಶೈಲಿಯ ಬೈಕ್ ಕಳ್ಳತನವೊಂದು ನಡೆದಿರುವ ಘಟನೆ ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ನಡೆದಿದ್ದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ. ಖಾಸಗಿ ಕಂಪನಿಯ ಉದ್ಯೋಗಿಯಾದ ಇಸ್ಮಾಯಿಲ್ ಕೆಲಸ ಮುಗಿಸಿ ಕಂಪನಿ ನೀಡಿದ್ದ ಬೈಕನ್ನು ರಾತ್ರಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದರು.
ಆದರೆ ತಡರಾತ್ರಿ ಬಂದ ಖದೀಮರು ಬಹಳ ಚಾಲಾಕಿತನದಿಂದ ಇಸ್ಮಾಯಿಲ್ ಅವರ ಬೈಕನ್ನು ಕದ್ದೊಯ್ದಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಳ್ಳರು ತಾವು ಬಂದಿದ್ದ ಹಳೆಯ ಬೈಕನ್ನು ಇಸ್ಮಾಯಿಲ್ ಮನೆಯ ಮುಂದೆಯೇ ಬಿಟ್ಟು, ಬದಲಿಗೆ ಇವರ ಬೈಕನ್ನು ಹೊತ್ತೊಯ್ದು 'ಎಕ್ಸ್ಚೇಂಜ್' ಮಾಡಿಕೊಂಡಿದ್ದಾರೆ. ಈ ವಿಶಿಷ್ಟ ಕಳ್ಳತನದ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಈಗ ಖದೀಮರಿಗಾಗಿ ಜಾಲ ಬೀಸಿದ್ದಾರೆ.
PublicNext
03/04/2026 06:28 pm
LOADING...