ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೆಂಕಟೇಶ್ ಪ್ರಸಾದ್, ಅರ್ಜುನ್ ಜನ್ಯ ಸೇರಿದಂತೆ ಆರು ಸಾಧಕರಿಗೆ ಬೆಂಗಳೂರು ನಗರ ವಿವಿ 'ಗೌರವ ಡಾಕ್ಟರೇಟ್' ಪ್ರದಾನ

ಬೆಂಗಳೂರು: ನಾಡಿನ ಪ್ರತಿಷ್ಠಿತ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವು ಕ್ರೀಡೆ, ಕಲೆ, ಶಿಕ್ಷಣ ಮತ್ತು ಉದ್ಯಮ ರಂಗದ ಆರು ಪ್ರಮುಖ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸುವ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ ಸಾಧಕರನ್ನು ಗುರುತಿಸಿ ಈ ಗೌರವ ನೀಡಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ. ಸಚಿವ ಎಂ.ಬಿ. ಪಾಟೀಲ್ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಎಲ್ಲಾ ಸಾಧಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್,. ಚಂದನವನದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, : ಶಿಕ್ಷಣ ತಜ್ಞ ಟಿ.ಕೆ. ನಾರಾಯಣಪ್ಪ, ಕೆ. ಗೋವಿಂದರಾಜು: ಇಂಟರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್ ಫೆಡರೇಶನ್ (FIBA) ಅಧ್ಯಕ್ಷರು, ಮೋಹನ್ ಆಳ್ವ ಶಿಕ್ಷಣ ತಜ್ಞರು ಹಾಗೂ ಸಾಂಸ್ಕೃತಿಕ ಚಿಂತಕರು, ಬಿ.ಎಂ. ಫರೂಕ್ ಪ್ರಮುಖ ಉದ್ಯಮಿಗಳು ಗೌರವಕ್ಕೆ ಪಾತ್ರರಾದ ಸಾಧಕರು.

ಸಮಾಜದ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿರುವ ಇಂತಹ ಅರ್ಹ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸ್ವತಃ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮೌಲ್ಯವು ವೃದ್ಧಿಯಾಗುತ್ತದೆ. ಸಾಧನೆಯ ಶಿಖರ ಏರಿ ಗೌರವ ಡಾಕ್ಟರೇಟ್ ಪಡೆದ ಎಲ್ಲಾ ಸಾಧಕರಿಗೆ ನಾಡಿನೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Edited By : Nirmala Aralikatti
PublicNext

PublicNext

06/04/2026 12:33 pm

Cinque Terre

21.28 K

Cinque Terre

0

ಸಂಬಂಧಿತ ಸುದ್ದಿ