ಹಾವೇರಿ ಜಿಲ್ಲೆಯ ಜೀವನಾಡಿ ವರದಾ ನದಿ. ಮಳೆಗಾಲದ ನಾಲ್ಕೈದು ತಿಂಗಳು ತುಂಬಿ ಹರಿಯುವ ವರದೆಯ ಒಡಲು ಬರಿದಾಗುತ್ತೆ.
ಹಾವೇರಿ ತಾಲೂಕು ಕರ್ಜಗಿ ಗ್ರಾಮಸ್ಥರು ಬೇಸಿಗೆ ಕಾಲದಲ್ಲಿ ನದಿಯ ತಟದಲ್ಲಿ ಗುಂಡಿ ತೆಗೆದು ವರ್ತಿ ನೀರು ಕುಡಿಯುತ್ತಾರೆ. ಈ ನೀರು ಶುಚಿ ರುಚಿಯಾಗಿರುತ್ತೆ. ಈ ನೀರಿನಿಂದ ಮಾಡಿದ ಅಡುಗೆ ಬಹಳ ಸಮಯ ಇಟ್ಟರೂ ಕೆಡುವುದಿಲ್ಲ.
ಈ ನೀರಿನಿಂದ ಯಾವುದೇ ಖಾಯಲೆಗಳು ಬರುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ತಲತಲಾಂತರದಿಂದ ಈ ಪದ್ಧತಿಯಲ್ಲಿ ನಾವು ನೀರು ಕುಡಿಯುತ್ತೇವೆ ನಮಗೆ ಯಾವ ಸಮಸ್ಯೆಯಾಗಿಲ್ಲ ಎನ್ನುತ್ತವೆ ಈ ಗ್ರಾಮದ ಹಿರಿಯ ಜೀವಗಳು.
ಬೇಸಿಗೆ ಆರಂಭದಲ್ಲಿ ನದಿಯ ತಟದ ಮರಳಿನಲ್ಲಿ ಸಂಗ್ರಹವಾಗುವ ನೀರನ್ನು ಗ್ರಾಮಸ್ಥರು ಬಳಕೆ ಮಾಡುತ್ತಾರೆ. ಮುಂಜಾನೆ ಮತ್ತು ಸಂಜೆ ನದಿಯ ವರ್ತಿಯಲ್ಲಿ ನೀರು ತುಂಬುವ ಕುಟುಂಬಗಳು ಕಾಣುತ್ತವೆ.
PublicNext
07/04/2026 10:24 am
LOADING...