ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್: ಮಾಸನಕಟ್ಟಿ ಬಳಿ ಕಾರೊಂದು ಡಿಕ್ಕಿ ಹೊಡೆದು ಕೃಷ್ಣಮೃಗ ಸಾವು.!

ಹಾನಗಲ್: ಹಾನಗಲ್ ತಾಲ್ಲೂಕಿನ ಮಾಸನಕಟ್ಟಿ ಹೊರವಲಯದ ಕೆರೆಯ ಹತ್ತಿರ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೃಷ್ಣಮೃಗ ಮೃತಪಟ್ಟಿರುವ ಘಟನೆ ನಡೆದಿದೆ.

ಬಂಕಾಪುರ- ಹಾನಗಲ್‌ ರಸ್ತೆಯಲ್ಲಿರುವ ಮಾಸನಕಟ್ಟಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಕೆರೆಯ ಬಳಿ ವೇಗವಾಗಿ ಜಿಗಿಯುತ್ತ ರಸ್ತೆ ದಾಟುತ್ತಿದ್ದ ಕೃಷ್ಣಮೃಗಕ್ಕೆ ಕಾರೊಂದು ಡಿಕ್ಕಿ ಹೊಡೆದಿದೆ, ಇನ್ನೂ ಕಾರು ಡಿಕ್ಕಿ ಹೊಡೆದ ರಭಸಕ್ಕೆ ತೀವ್ರ ರಕ್ತಸ್ರಾವದಿಂದ ಗಾಯಗೊಂಡ ಕೃಷ್ಣಮೃಗ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.

ಈ ಘಟನೆಯಲ್ಲಿ ಕಾರಿನ ಮುಂದಿನ ಗಾಜು ಒಡೆದು ಹೋಗಿದೆ, ಇನ್ನೂ ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಕಸ್ಮಿಕವಾಗಿ ನಡೆದ ಈ ಅವಘಡದಿಂದಾಗಿ ಕೃಷ್ಣಮೃಗ ಮೃತಪಟ್ಟಿದೆ, ಹೀಗಾಗಿ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ ಎಂದು ಹಾನಗಲ್ ಆರ್‌ಎಫ್‌ಒ ಗಣೇಶ ಶೆಟ್ಟರ್ ತಿಳಿಸಿದ್ದಾರೆ.

- ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್ ಹಾನಗಲ್

Edited By : Nagaraj Tulugeri
Kshetra Samachara

Kshetra Samachara

29/04/2026 04:38 pm

Cinque Terre

9.5 K

Cinque Terre

0

ಸಂಬಂಧಿತ ಸುದ್ದಿ