ಹಾವೇರಿ: ಜಿಲ್ಲೆಯ ವಿವಿಧಡೆ ಒಂದೇ ದಿನ ೧೦ ಕ್ಕೂ ಅಧಿಕ ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಹಾವೇರಿ ದೇವಗಿರಿ, ಗುತ್ತಲ ನೆಲೋಗಲ್ ಮತ್ತು ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳು ದಾಳಿ ನಡೆಸಿವೆ.
ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿವೆ. ಹಿರೇಹಳ್ಳಿ ಗ್ರಾಮದ ಓರ್ವ ಬಾಲಕನಿಗೆ ನಾಯಿಗಳು ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿವೆ.
ಪೃತ್ವಿಕ್, ಯಶವಂತ, ಫಾತಿಮಾ, ಅಹ್ಮದ್, ಭುವನ್, ಕಾರ್ತಿಕ್, ನೀಲಮ್ಮ ಗಾಯಾಳುಗಳು. ದಾಳಿ ಮಾಡಿದ ನಾಯಿಗಳಿಗೆ ರೇಬಿಸ್ ಸೊಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
Kshetra Samachara
30/04/2026 10:50 am
LOADING...