ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಂಗೇರುತ್ತಿದೆ ಉಪಚುನಾವಣಾ ಕಣ : ಬಾಗಲಕೋಟೆಯಲ್ಲಿ ಎಂ.ಬಿ. ಪಾಟೀಲ್ ಬಿರುಸಿನ ಪ್ರಚಾರ

ಬಾಗಲಕೋಟೆ : ಬಾಗಲಕೋಟೆ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ನಗರದಲ್ಲಿ ನಡೆದ ಬಿರುಸಿನ ಪ್ರಚಾರ ಸಭೆಯಲ್ಲಿ ಸಚಿವ ಎಂ.ಬಿ. ಪಾಟೀಲ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ಚುನಾವಣಾ ಸಭೆಯಲ್ಲಿ ಶ್ರೀ ಸುರೇಶ್ ಕುದರಿಕಣ್ಣೂರು, ಶ್ರೀ ವಿಜಯ್ ಕುದರಿಕಣ್ಣೂರು, ಶ್ರೀ ಶರಣಪ್ಪ ಕುದರಿಕಣ್ಣೂರು, ಶ್ರೀ ಅಜ್ಜಪ್ಪ ನಾಗರಾಳೆ, ಶ್ರೀ ಗಂಗಪ್ಪ ಉಳ್ಳಗಡ್ಡಿ, ಶ್ರೀ ಶಿವು ಬಾಳಿಕಾಯಿ, ಡಾ. ಗಂಗಾಧರ ಸಂಬಣ್ಣಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಹಾಜರಿದ್ದರು.

ಇದೇ ವೇಳೆ ಮಾತನಾಡಿದ ಸ್ಥಳೀಯ ಮುಖಂಡರು ಬಾಗಲಕೋಟೆಯಲ್ಲಿ ಮತ್ತೆ ಕಾಂಗ್ರೆಸ್‌ನ ವಿಜಯಪತಾಕೆ ಹಾರಲಿದೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರ ಈ ಆತ್ಮವಿಶ್ವಾಸದ ಮಾತುಗಳನ್ನು ಕೇಳಿ ಸಚಿವ ಎಂ.ಬಿ. ಪಾಟೀಲ್ ಹರ್ಷ ವ್ಯಕ್ತಪಡಿಸಿದರು.

Edited By : Nirmala Aralikatti
PublicNext

PublicNext

07/04/2026 05:53 pm

Cinque Terre

15.36 K

Cinque Terre

0

ಸಂಬಂಧಿತ ಸುದ್ದಿ